ಟ್ನೆಸ್  ಚಾಲೆಂಜ್ ಈಗ ಸ್ಯಾಂಡಲ್'ವುಡ್ ನಲ್ಲಿ ಇಬ್ಬರು ಸ್ಟಾರ್ ನಟರಾದ ಕಿಚ್ಚ ಸುದೀಪ್ ಹಾgU ರಾಕಿಂಗ್ ಸ್ಟಾರ್ ಯಶ್ ಅಭಿಮಾನಿಗಳ ಕಿತ್ತಾಟಕ್ಕೆ ಕಾರಣವಾಗಿದೆ.  

ಬೆಂಗಳೂರು (ಜೂ. 05): ಫಿಟ್ನೆಸ್ ಚಾಲೆಂಜ್ ಈಗ ಸ್ಯಾಂಡಲ್'ವುಡ್ ನಲ್ಲಿ ಇಬ್ಬರು ಸ್ಟಾರ್ ನಟರಾದ ಕಿಚ್ಚ ಸುದೀಪ್ ಹಾಗೂ ರಾಕಿಂಗ್ ಸ್ಟಾರ್ ಯಶ್ ಅಭಿಮಾನಿಗಳ ಕಿತ್ತಾಟಕ್ಕೆ ಕಾರಣವಾಗಿದೆ. 

ಕೆಲ ದಿನಗಳ ಹಿಂದೆ ಕಿಚ್ಚ ಸುದೀಪ್ ಗೆ ಕ್ರಿಕೆಟಿಗ ವಿನಯ್ ಕುಮಾರ್ ಫಿಟ್ನೆಸ್ ಚಾಲೆಂಜ್ ಹಾಕಿದ್ರು. ಈ ಚಾಲೆಂಜ್ ನ ಸುದೀಪ್, ಯಶ್ ಹಾಗೂ ಶಿವಣ್ಣನಿಗೆ ನೀಡಿದರು. ಈ ಸವಾಲನ್ನು ಸ್ವೀಕರಿಸಿದ ಯಶ್ ಮಾತನಾಡಬೇಕಾದ್ರೆ, ಸುದೀಪ್ ಅಂತಾ ಕರೆದಿದ್ದು ಈಗ ಸುದೀಪ್ ಅಭಿಮಾನಿಗಳ ಕೆಂಗಣ್ಣಿಗೆ ಗುರಿಯಾಗಿದೆ.

 ಸುದೀಪ್’ನನ್ನು ಏಕವಚನದಲ್ಲಿ ಎಂದು ಮಾತಾಡಿಸುತ್ತಿದ್ದೀಯಾ ಎಂದು ಸುದೀಪ್ ಅಭಿಮಾನಿಗಳು ಟ್ಟೀಟ್ಟರ್ ನಲ್ಲಿ ತಮ್ಮ ಆಕ್ರೋಶವನ್ನ ವ್ಯಕ್ತಪಡಿಸಿದ್ದಾರೆ. ಇದರ ಬಗ್ಗೆ ಸುದೀಪ್ ಮಾತನಾಡಿ, ಇದನ್ನು ದೊಡ್ಡದು ಮಾಡುವ ಅವಶ್ಯಕತೆಯಿಲ್ಲ. ನನಗೆ ಹಾಕಿರುವ ಫಿಟ್​ನೆಸ್​ ಚಾಲೆಂಜ್​ ನಾನು ಮಾಡ್ತೀನಿ ಅದು ಮುಖ್ಯ ಅಂತ ಅಭಿಮಾನಿಗಳಿಗೆ ಸಮಾಧಾನ ಹೇಳಿದ್ದಾರೆ. ಆದ್ರೆ ಸುದೀಪ್ ಅಭಿಮಾನಿಗಳು ಮಾತ್ರ ಯಶ್ ಕ್ಷಮೆ ಕೇಳಬೇಕು ಎಂದು ಒತ್ತಾಯಿಸಿದ್ದಾರೆ.

"

Scroll to load tweet…