ಪ್ರಧಾನಿ ನರೇಂದ್ರ ಮೋದಿ ಹಾಗೂ ಬಿಜೆಪಿ ಕುರಿತಾದ ಮೀಮ್ ಮತ್ತು ಲೇಖನಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಶೇರ್ ಮಾಡಿದ ಕಾರಣಕ್ಕಾಗಿ ತಮ್ಮ ಮುಸ್ಲಿಂ ಹೆಸರನ್ನು (ನಖಾತ್ ಖಾನ್) ಪ್ರಸ್ತಾಪಿಸಿ ಟ್ರೋಲ್ ಮಾಡುತ್ತಿರುವ ವ್ಯಕ್ತಿಗಳ ವಿರುದ್ಧ ನಟಿ ಹಾಗೂ ಕಾಂಗ್ರೆಸ್ ರಾಷ್ಟ್ರೀಯ ವಕ್ತಾರೆ ಖುಷ್ಬೂ ತಿರುಗಿ ಬಿದ್ದಿದ್ದಾರೆ.
ಚೆನ್ನೈ: ಪ್ರಧಾನಿ ನರೇಂದ್ರ ಮೋದಿ ಹಾಗೂ ಬಿಜೆಪಿ ಕುರಿತಾದ ಮೀಮ್ ಮತ್ತು ಲೇಖನಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಶೇರ್ ಮಾಡಿದ ಕಾರಣಕ್ಕಾಗಿ ತಮ್ಮ ಮುಸ್ಲಿಂ ಹೆಸರನ್ನು (ನಖಾತ್ ಖಾನ್) ಪ್ರಸ್ತಾಪಿಸಿ ಟ್ರೋಲ್ ಮಾಡುತ್ತಿರುವ ವ್ಯಕ್ತಿಗಳ ವಿರುದ್ಧ ನಟಿ ಹಾಗೂ ಕಾಂಗ್ರೆಸ್ ರಾಷ್ಟ್ರೀಯ ವಕ್ತಾರೆ ಖುಷ್ಬೂ ತಿರುಗಿ ಬಿದ್ದಿದ್ದಾರೆ.
‘ಹೌದು, ನಾನೊಬ್ಬಳು ಖಾನ್. ಏನಿವಾಗ?’ ಎಂದು ಪ್ರಶ್ನಿಸಿದ್ದಾರೆ. ‘ಮೂರ್ಖರೇ, ಅದು ನನ್ನ ತಂದೆ -ತಾಯಿ ಇಟ್ಟ ಹೆಸರು. ಹೌದು. ನಾನೊಬ್ಬಳು ಖಾನ್ ಏನಿವಾಗ? ಈ ರೀತಿ ಟ್ರೋಲ್ ಮಾಡುತ್ತಿರುವವರು ತಡವಾಗಿ ಅರಳಿದವರು. ಅದೂ 47 ವರ್ಷಗಳ ಕಾಲ ವಿಳಂಬವಾಗಿ’ ಎಂದು ತಿವಿದಿದ್ದಾರೆ.
