ನಿನ್ನೆ ಶಾಸಕ ಅಶೋಕ್ ಖೇಣಿ ನಿವಾಸದಲ್ಲಿ ಶಾರ್ಟ್ ಸರ್ಕ್ಯೂಟ್ನಿಂದಾಗಿ ಬೆಂಕಿ ಅವಘಡ ಸಂಭವಿಸಿತ್ತು. ಆದರೆ ಈ ಬೆಂಕಿ ಅವಘಡ ಉದ್ದೇಶಪೂರ್ವಕ ಕುತಂತ್ರ ಎಂದು ಟಿ.ಜೆ.ಅಬ್ರಹಾಂ ಆರೋಪಿಸಿದ್ದಾರೆ.
ಬೆಂಗಳೂರು: ಶಾಸಕ ಅಶೋಕ್ ಖೇಣಿ ಬೀದರ್ ನಿವಾಸದಲ್ಲಿ ನಿನ್ನೆ ನಡೆದ ಬೆಂಕಿ ಅವಘಡ ಒಂದು ನಾಟಕ ಎಂದು ಸಾಮಾಜಿಕ ಕಾರ್ಯಕರ್ತ ಟಿ.ಜೆ.ಅಬ್ರಹಾಂ ಆರೋಪಿಸಿದ್ದಾರೆ.
ನಿನ್ನೆ ಶಾಸಕ ಅಶೋಕ್ ಖೇಣಿ ನಿವಾಸದಲ್ಲಿ ಶಾರ್ಟ್ ಸರ್ಕ್ಯೂಟ್ನಿಂದಾಗಿ ಬೆಂಕಿ ಅವಘಡ ಸಂಭವಿಸಿತ್ತು. ಆದರೆ ಈ ಬೆಂಕಿ ಅವಘಡ ಉದ್ದೇಶಪೂರ್ವಕ ಕುತಂತ್ರ ಎಂದು ಟಿ.ಜೆ.ಅಬ್ರಹಾಂ ಆರೋಪಿಸಿದ್ದಾರೆ.
ಇಂದು ಅಶೋಕ್ ಖೇಣಿ ಒಂದು ಕೇಸಿನ ವಿಚಾರಕ್ಕಾಗಿ ಕೋರ್ಟ್’ ಗೆ ಹಾಜರಾಗಬೇಕಿತ್ತು. ಆದರೆ ಬೆಂಕಿ ಅವಘಡದ ನೆಪವೊಡ್ಡಿ ಕೋರ್ಟ್’ನಿಂದ ತಪ್ಪಿಸಿಕೊಂಡಿದ್ದಾರೆ. ಅಧಿವೇಶನದಲ್ಲಿ ಇರಬೇಕಿದ್ದ ಖೇಣಿ, ಬೀದರ್’ನಲ್ಲಿ ಯಾಕೆ ಇದ್ರು ಎಂದು ಅಬ್ರಹಾಂ ಪ್ರಶ್ನಿಸಿದ್ದಾರೆ.