ಈ ಟಿಕ್ ಟಾಕ್ ಎನ್ನುವ ಮಾಯೆ ಅದೆಷ್ಟು ಜನರನ್ನು ತನ್ನ ವಶಕ್ಕೆ ತೆಗೆದುಕೊಂಡಿದೆಯೋ ಹೇಳಲು ಸಾಧ್ಯವಿಲ್ಲ. ಕಾಲೇಜು ವಿದ್ಯಾರ್ಥಿಗಳು ಮಾತ್ರವಲ್ಲ ಗೃಹಿಣಿಯರು ಸಹ ಮರುಳಾಗಿದ್ದಾರೆ. ಆದರೆ ಇಲ್ಲಿ ಹನ್ನೊಂದು ಸಿಬ್ಬಂದಿ ಟಿಕ್ ಟಾಕ್ ಹುಚ್ಚಿಗೆ ಬಿದ್ದು ವೇತನ ಕಳೆದುಕೊಂಡಿದ್ದಾಳೆ.
ಹೈದರಾಬಾದ್(ಜು. 18) ಖಮ್ಮಾಮ್ ಮುನ ನ್ಸಿಪಲ್ ಕಾರ್ಪೋರೇಶನ್ ನಲ್ಲಿ ಹೊರಗುತ್ತಿಗೆ ಆಧಾರದಲ್ಲಿ ಕೆಲಸ ಮಾಡುತ್ತಿದ್ದ ಹನ್ನೊಂದು ಜನ ಸಿಬ್ಬಂದಿ ಹತ್ತು ದಿನದ ಸಂಬಳ ಕಳೆದುಕೊಂಡಿದ್ದಾರೆ. ಇದಕ್ಕೆ ಕಾರಣ ಟಿಕ್ ಟಾಕ್ ಮಾಯೆ!
ಟಿಕ್ ಟಾಕ್ ನಲ್ಲಿ ಸದಾ ಕಾಲ ಇರುವುದನ್ನು ಗಮನಿಸಿದ ಕಾರ್ಪೋರೇಶನ್ ಈ ಕಟ್ಟುನಿಟ್ಟಿನ ಕ್ರಮ ತೆಗೆದುಕೊಂಡಿದೆ.
ಸಿಬ್ಬಂದಿಗೆ ಇನ್ನು ಮುಂದೆ ಕೆಲಸದ ಸಮಯದಲ್ಲಿ ಟಿಕ್ ಟಾಕ್ ನಿಂದ ದೂರ ಇರುವಂತೆಯೂ ಮುನ್ಸಿಪಲ್ ಕಮಿಷನರ್ ಜೆ. ಶ್ರೀನಿವಾಸ್ ರಾವ್ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ. ಕಚೇರಿಯ ಪರಿಸರವನ್ನು ಮಿಸ್ ಯೂಸ್ ಮಾಡಿಕೊಂಡಿದ್ದೀರಿ ಎಂಬ ತಿಳಿವಳಿಕೆಯನ್ನು ನೀಡಿದ್ದಾರೆ.
ನವಜಾತ ಮಗುವಿನೊಂದಿಗೆ ನರ್ಸ್ ಗಳ ಟಿಕ್ ಟಾಕ್
ಕ್ಲರಿಕಲ್ ಪೋಸ್ಟ್ ನಲ್ಲಿ ಕೆಲಸ ಮಾಡುತ್ತಿದ್ದ ಸಿಬ್ಬಂದಿ ಕಚೇರಿಯಲ್ಲೇ ಶೂಟ್ ಮಾಡಿದ ಟಿಕ್ ಟಾಕ್ ವಿಡಿಯೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದವು. ಹನ್ನೊಂದು ಸಿಬ್ಬಂದಿ ಈ ರೀತಿಯ ಕೆಲಸದಲ್ಲಿ ತೊಡಗಿದ್ದನ್ನು ವಿಡಿಯೋ ಬಹಿರಂಗ ಮಾಡಿದ್ದು ಪ್ರಾಥಮಿಕ ಶಿಕ್ಷೆ ಎಂಬಂತೆ ಹತ್ತು ದಿನದ ವೇತನ ಕಟ್ ಮಾಡಿ ಎಚ್ಚರಿಕೆ ನೀಡಲಾಗಿದೆ.
