ಅಮೆರಿಕ ಪ್ರವಾಸದಲ್ಲಿರುವ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಅವರಿಗೆ ಖಲಿಸ್ತಾನ ಉಗ್ರರಿಂದ ಬೆದರಿಕೆ ಇತ್ತು ಎಂಬ ವಿಚಾರ ಇದೀಗ ಬೆಳಕಿಗೆ ಬಂದಿದೆ. ಈ ಬಗ್ಗೆ ಕೇಂದ್ರ ಗೃಹ ಇಲಾಖೆಗೆ ವಿಶೇಷ ಭದ್ರತಾಪಡೆ (ಎಸ್‌ಪಿಜಿ) ಪತ್ರ ಬರೆದಿದ್ದ ಅಂಶ ಇದೀಗ ಬಯಲಾಗಿದೆ.
ನವದೆಹಲಿ: ಅಮೆರಿಕ ಪ್ರವಾಸದಲ್ಲಿರುವ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಅವರಿಗೆ ಖಲಿಸ್ತಾನ ಉಗ್ರರಿಂದ ಬೆದರಿಕೆ ಇತ್ತು ಎಂಬ ವಿಚಾರ ಇದೀಗ ಬೆಳಕಿಗೆ ಬಂದಿದೆ.
ಈ ಬಗ್ಗೆ ಕೇಂದ್ರ ಗೃಹ ಇಲಾಖೆಗೆ ವಿಶೇಷ ಭದ್ರತಾಪಡೆ (ಎಸ್ಪಿಜಿ) ಪತ್ರ ಬರೆದಿದ್ದ ಅಂಶ ಇದೀಗ ಬಯಲಾಗಿದೆ.
ಅಮೆರಿಕ ಪ್ರವಾಸದ ವೇಳೆ ತಮಗೆ ನೀಡಲಾಗಿರುವ ವಿಶೇಷ ಭದ್ರತಾ ಪಡೆಗಳ ರಕ್ಷಣೆಯನ್ನು ರಾಹುಲ್ ಗಾಂಧಿ ಅವರು ನಿರಾಕರಿಸಿದ್ದರು. ಆದರೆ, ರಾಹುಲ್ ಗಾಂಧಿ ಅವರಿಗೆ ಅಮೆರಿಕದಲ್ಲಿ ಖಲಿಸ್ತಾನ ಉಗ್ರರಿಂದ ಬೆದರಿಕೆ ಇದೆ.
ಈ ಹಿನ್ನೆಲೆಯಲ್ಲಿ ಅಮೆರಿಕ ಪ್ರವಾಸದ ವೇಳೆಯೂ ಅವರಿಗೆ ಎಸ್ಪಿಜಿ ಭದ್ರತೆ ನೀಡಬೇಕು ಎಂದು ಎಸ್ಪಿಜಿ ಪತ್ರದಲ್ಲಿ ತಿಳಿಸಿತ್ತು ಎಂದು ಆಂಗ್ಲ ಸುದ್ದಿವಾಹಿನಿಯೊಂದು ವರದಿ ಮಾಡಿದೆ.
ರಾಹುಲ್ ಗಾಂಧಿ ಅವರು ಈ ಹಿಂದೆ ಹಲವು ಬಾರಿ ಎಸ್ಪಿಜಿ ಭದ್ರತೆ ನಿರಾಕರಿಸಿದ್ದರು ಎಂಬ ವಿಚಾರವನ್ನು ಕಳೆದ ಅಧಿವೇಶನದಲ್ಲಿ ಗೃಹ ಸಚಿವ ರಾಜನಾಥ್ ಸಿಂಗ್ ಲೋಕಸಭೆಗೆ ಮಾಹಿತಿ ನೀಡಿದ್ದರು
