ರಾಜೀವ್ ಗಾಂಧಿಯವರು ಮೇ.22, 1991ರಂದು ತಮಿಳುನಾಡಿನ ಶ್ರೀಪೆರಂಬದೂರುವಿನಲ್ಲಿ ಮಾನವ ಬಾಂಬ್ ಸ್ಫೋಟಕ್ಕೆ ಬಲಿಯಾಗಿದ್ದರು.

ನವದೆಹಲಿ(ಡಿ.25): ಮಾಜಿ ಪ್ರಧಾನಿ ರಾಜೀವ್ ಗಾಂಧಿ ಅವರ ಹತ್ಯೆ ಪ್ರಕರಣದ ಬಗ್ಗೆ ನ್ಯಾಯಸಮ್ಮತ ತನಿಖೆಯ ಭರವಸೆ ಮತ್ತು ಈ ವಿಚಾರದಲ್ಲಿ ಮಧ್ಯಸ್ಥಿಕೆ ವಹಿಸುವಂತೆ ಕೋರಿ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪ್ರಮುಖ ಸಾಕ್ಷಿದಾರ ಪತ್ರ ಬರೆದಿದ್ದಾರೆ.

"ರಾಜೀವ್ ಗಾಂಧಿ ಅವರ ಕೊಲೆ ಪ್ರಕರಣದ ಪ್ರಮುಖ ಸಾಕ್ಷಿದಾರ ನಾನಾಗಿದ್ದೇನೆ. ಈ ಬಗ್ಗೆ ಸಿಬಿಐ ಪೂರಕ ಚಾರ್ಜ್ ಶೀಟ್ ಸಲ್ಲಿಸಬೇಕಿದೆ. ಹಾಗಾಗಿ, ನ್ಯಾಯಸಮ್ಮತದ ತನಿಖೆಗೆ ನಿಮ್ಮ ವೈಯಕ್ತಿಕ ಮಧ್ಯಸ್ಥಿಕೆಯ ಅಗತ್ಯವಿದೆ,’’ ಎಂದು ಸಾಕ್ಷಿದಾರ ರಮೇಶ್ ದಲಾಲ್ ಪ್ರಧಾನಿಗೆ ಬರೆದ ಪತ್ರದಲ್ಲಿ ತಿಳಿಸಿದ್ದಾರೆ.

ಕೆಲ ದಿನಗಳ ಹಿಂದಷ್ಟೇ ರಾಜೀವ್ ಗಾಂಧಿ ಹತ್ಯೆ ಹಿಂದಿನ ಪಿತೂರಿ ತನಿಖೆಯ ಬಗ್ಗೆ ಪ್ರತಿಕ್ರಿಯೆ ನೀಡುವಂತೆ ಕೇಂದ್ರ ಮತ್ತು ಸಿಬಿಐಗೆ ಸುಪ್ರೀಂ ಕೋರ್ಟ್ ಸೂಚಿಸಿತ್ತು.

ರಾಜೀವ್ ಗಾಂಧಿಯವರು ಮೇ.22, 1991ರಂದು ತಮಿಳುನಾಡಿನ ಶ್ರೀಪೆರಂಬದೂರುವಿನಲ್ಲಿ ಮಾನವ ಬಾಂಬ್ ಸ್ಫೋಟಕ್ಕೆ ಬಲಿಯಾಗಿದ್ದರು.