2018ರ ಮಾರ್ಚ್ ವೇಳೆಗೆ ಎಲ್‌'ಪಿಜಿ ಸಬ್ಸಿಡಿಯನ್ನು ಪೂರ್ಣವಾಗಿ ರದ್ದುಗೊಳಿಸಲು ನಿರ್ಧರಿಸಿರುವ ನಡುವೆಯೇ, ಕಡುಬಡವರು ಬಳಸುವ ಸೀಮೆ ಎಣ್ಣೆ ಬೆಲೆಯನ್ನೂ 15 ದಿನಕ್ಕೊಮ್ಮೆ ಏರಿಸುವ ಯೋಜನೆಯನ್ನು ಸರ್ಕಾರ ಸದ್ದಿಲ್ಲದೇ ಜಾರಿಗೆ ತಂದಿರುವುದು ಬೆಳಕಿಗೆ ಬಂದಿದೆ.
ನವದೆಹಲಿ(ಆ.04): 2018ರ ಮಾರ್ಚ್ ವೇಳೆಗೆ ಎಲ್'ಪಿಜಿ ಸಬ್ಸಿಡಿಯನ್ನು ಪೂರ್ಣವಾಗಿ ರದ್ದುಗೊಳಿಸಲು ನಿರ್ಧರಿಸಿರುವ ನಡುವೆಯೇ, ಕಡುಬಡವರು ಬಳಸುವ ಸೀಮೆ ಎಣ್ಣೆ ಬೆಲೆಯನ್ನೂ 15 ದಿನಕ್ಕೊಮ್ಮೆ ಏರಿಸುವ ಯೋಜನೆಯನ್ನು ಸರ್ಕಾರ ಸದ್ದಿಲ್ಲದೇ ಜಾರಿಗೆ ತಂದಿರುವುದು ಬೆಳಕಿಗೆ ಬಂದಿದೆ.
ಪಡಿತರ ವ್ಯವಸ್ಥೆಯಲ್ಲಿ ವಿತರಿಸುವ ಸೀಮೆಎಣ್ಣೆ ಬೆಲೆಯನ್ನು ಪ್ರತಿ 15 ದಿನಗಳಿಗೊಮ್ಮೆ 25 ಪೈಸೆಯಂತೆ ಏರಿಸಲು ಸರ್ಕಾರಿ ಸ್ವಾಮ್ಯದ ತೈಲ ಕಂಪನಿಗಳಿಗೆ ಸರ್ಕಾರ ಸೂಚಿಸಿದೆ. ಕಳೆದ ವರ್ಷ ಕೂಡಾ ತೈಲ ಕಂಪನಿಗಳ ಬೇಡಿಕೆಯಂತೆ ಮಾಸಿಕ 50 ಪೈಸೆಯಷ್ಟು ದರ ಏರಿಕೆ ಮಾಡಲು ಸರ್ಕಾರ ಸಮ್ಮತಿಸಿತ್ತು. ಅದರ ಹೊರತಾಗಿ ಈ ಏರಿಕೆಗೆ ಸರ್ಕಾರದಿಂದ ಸೂಚನೆ ಹೊರಬಿದ್ದಿದೆ ಎಂದು ಆಂಗ್ಲ ಪತ್ರಿಕೆಯೊಂದು ವರದಿ ಮಾಡಿದೆ.
ಎಲ್ಪಿಜಿ ಸಬ್ಸಿಡಿಯನ್ನು ಪೂರ್ಣವಾಗಿ ರದ್ದುಗೊಳಿಸುವ ನಿಟ್ಟಿನಲ್ಲಿ ಮಾಸಿಕ 4 ರು.ನಷ್ಟು ಏರಿಕೆ ಮಾಡಲು ನಿರ್ಧಸಲಾಗಿದೆ ಎಂದು ಸರ್ಕಾರ ಇತ್ತೀಚೆಗೆ ಮಾಹಿತಿ ನೀಡಿತ್ತು. ಇದಕ್ಕೆ ದೇಶಾದ್ಯಂತ ಆಕ್ರೋಶ ವ್ಯಕ್ತವಾದ ಬೆನ್ನಲ್ಲೇ, ಸೀಮೆಎಣ್ಣೆ ಬೆಲೆಯನ್ನೂ ಏರಿಸಲು ಸರ್ಕಾರ ನಿರ್ಧರಿಸಿರುವುದು ಬೆಳಕಿಗೆ ಬಂದಿದೆ.
