ದುಬೈ :  ಕೆಲವೊಮ್ಮೆ ಶುಭಸುದ್ದಿ ಮುನ್ಸೂಚನೆ ಅರಿವಿಲ್ಲದಂತೆಯೇ ನಮ್ಮ ಗಮನಕ್ಕೆ ಬಂದಿರುತ್ತದೆ. 

ಇಲ್ನೋಡಿ, ಯುಎಇದ ರಾಜಧಾನಿ ಅಬುದಾಬಿಯಲ್ಲಿನ ಕೇರಳ ಮೂಲದ ಬ್ರಿಟ್ಟಿಮಾರ್ಕೋಸ್‌ ಹಾಗೇ ಆಗಿದೆ. ಅಬುದಾಬಿಯಲ್ಲಿ ನಕ್ಷೆ ತಯಾರಕರಾಗಿ ಕೆಲಸ ಮಾಡುವ ಮಾರ್ಕೋಸ್‌ಗೆ ಆಗಾಗ್ಗೆ ಲಾಟರಿ ಕೊಳ್ಳುವ ಹವ್ಯಾಸ. ಹಲವು ಬಾರಿ ಕೇರಳೀಯರಿಗೆ ಬಹುಮಾನ ಬಂದಾಗಲೆಲ್ಲಾ ನನಗೂ ಒಮ್ಮೆ ಹೀಗೆ ಲಾಟರಿ ಹೊಡೆಯುಬಹುದು ಎಂದು ಅಂದುಕೊಳ್ಳುತ್ತಲೇ ಇದ್ದರು. 

ಆದರೆ ಇತ್ತೀಚೆಗೆ ಲಾಟರಿ ಟಿಕೆಟ್‌ ಕೊಂಡಾಗ, ಈ ಬಾರಿ ನನಗೆ ಲಾಟರಿ ಹೊಡೆಯುವುದು ಖಚಿತ ಎಂದು ಅವರ ಮನಸ್ಸಿಗೆ ಬಂದಿತ್ತಂತೆ. ಅಚ್ಚರಿ ಎಂಬಂತೆ ಅವರಿಗೀಗ ಲಾಟರಿಯಲ್ಲಿ 20 ಕೋಟಿ ರು. ಬಹುಮಾನ ಬಂದಿದೆ. ಬಹುಮಾನದ ಸುದ್ದಿ ಕೇಳಿ ಮಾರ್ಕೋಸ್‌ ಭರ್ಜರಿ ಖುಷಿಯಾಗಿದ್ದಾರಂತೆ.