ತಮ್ಮನ ಸಾವು : ಮೂರು ವರ್ಷಗಳಿಂದ ಪ್ರತಿಭಟನೆ ನಡೆಸುತ್ತಿರುವ ಯುವಕ

First Published 14, Jan 2018, 10:46 AM IST
Kerala Man  Protest Over 760 Days
Highlights

ಸಹೋದರನ ಕಸ್ಟಡಿ ಸಾವು ಪ್ರಕರಣ ವನ್ನು ಸಿಬಿಐ ತನಿಖೆಗೊಪ್ಪಿಸುವಂತೆ ಒತ್ತಾಯಿಸಿ ಯುವಕನೋರ್ವ ಕೇರಳ ವಿಧಾನಸಭೆಯ ಮುಂದೆ 3 ವರ್ಷಗಳಿಂದ ಪ್ರತಿಭಟನೆ ನಡೆಸುತ್ತಿದ್ದಾನೆ.

ತಿರುವನಂತಪುರಂ: ಸಹೋದರನ ಕಸ್ಟಡಿ ಸಾವು ಪ್ರಕರಣ ವನ್ನು ಸಿಬಿಐ ತನಿಖೆಗೊಪ್ಪಿಸುವಂತೆ ಒತ್ತಾಯಿಸಿ ಯುವಕನೋರ್ವ ಕೇರಳ ವಿಧಾನಸಭೆಯ ಮುಂದೆ 3 ವರ್ಷಗಳಿಂದ ಪ್ರತಿಭಟನೆ ನಡೆಸುತ್ತಿದ್ದಾನೆ.

ಸುಮಾರು 765 ದಿನಗಳ ಪ್ರತಿಭಟನೆ ನಡೆಸಿರುವ ಯುವಕನ ಬೇಡಿಕೆಗೆ ಧ್ವನಿಗೂಡಿಸಿರುವ ಕಾಂಗ್ರೆಸ್ ಮತ್ತು ಬಿಜೆಪಿ, ಯುವಕನ ಬೇಡಿಕೆ ಆಲಿಸುವಂತೆ ಸರ್ಕಾರವನ್ನು ಒತ್ತಾಯಿಸಿವೆ.

ಪರಸ್ಸಾಲ ನಿವಾಸಿ ಶ್ರೀಜಿತ್ ಎಂಬ ಯುವಕನ ಪ್ರತಿಭಟನೆಯ ವಿಷಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆದ ಹಿನ್ನೆಲೆಯಲ್ಲಿ, ಶನಿವಾರ ವಿವಿಧ ಪಕ್ಷಗಳ ಮುಖಂಡರು ಆತನನ್ನು ಭೇಟಿಯಾಗಿ ಮಾತನಾಡಿಸಿದರು.

2014, ಮೇ 19ರಂದು ಶ್ರೀಜಿತ್ ತಮ್ಮ ಶ್ರೀಜೀವ್‌ನನ್ನು ಮೊಬೈಲ್ ಕಳ್ಳತನದ ಆಪಾದನೆಯಲ್ಲಿ ಪೊಲೀಸರು ವಶಕ್ಕೆ ಪಡೆದಿದ್ದರು. ಎರಡು ದಿನಗಳ ಬಳಿಕ ಆತ ಸರ್ಕಾರಿ ವೈದ್ಯಕೀಯ ಕಾಲೇಜಿನಲ್ಲಿ ಮೃತಪಟ್ಟಿದ್ದನು.

ಶ್ರೀಜೀತ್ ಆರೋಗ್ಯ ಹದಗೆಡುತ್ತಿರುವುದರಿಂದ ತಕ್ಷಣವೇ ಸಿಎಂ ಪಿಣರಾಯಿ ವಿಜಯನ್ ಮಧ್ಯಪ್ರವೇಶಿಸಿ, ಪ್ರತಿಭಟನೆ ಕೊನೆಗೊಳಿಸಲು ಸಹಕರಿಸುವಂತೆ ವಿಪಕ್ಷ ನಾಯಕ ರಮೇಶ್ ಚೆನ್ನಿತಾಲ ಪತ್ರ ಬರೆದು  ಒತ್ತಾಯಿಸಿದ್ದಾರೆ. ಪ್ರಕರಣದಲ್ಲಿ ತಕ್ಷಣವೇ ಮಧ್ಯಪ್ರವೇಶಿಸಿ ಸಿಬಿಐ ತನಿಖೆಗೆ ಆದೇಶಿಸುವಂತೆ ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್‌ಗೆ ಪತ್ರ ಬರೆದಿರುವ ರಾಜ್ಯಸಭಾ ಸಂಸದ, ಕೇರಳ ಎನ್‌ಡಿಎ ಉಪಾಧ್ಯಕ್ಷ ರಾಜೀವ್ ಚಂದ್ರಶೇಖರ್ ಆಗ್ರಹಿಸಿದ್ದಾರೆ.

loader