ತಿರುವನಂತಪುರಂ(ಜು.11): ಜೈಲಿನ ಆಹಾರ ಹೇಗಿರುತ್ತೆ, ಏನಿರುತ್ತೆ ಅನ್ನೋ ಕುತೂಹಲ ಇರೋರು ಬಹಳ ಜನ ಇರ್ತಾರೆ. ಆದರೆ ಜೈಲಿನ ಆಹಾರ ಸವಿಯಬೇಕು ಅಂದ್ರೆ ಜೈಲಿನ ಒಳಗೇ ಹೋಗಬೇಕು. ಆಹಾರದ ಆಸೆಗೆ ಬೇಕು ಬೇಕಂತಲೇ ಯಾರದ್ರೂ ಜೈಲಿಗೆ ಹೋಗ್ತಾರಾ.. ಅದೂ ಇಲ್ಲ. ಅಂತೂ ಜೈಲಿನ ಆಹಾರ ತಿನ್ನೋದು ಸಾಧ್ಯಾನೇ ಇಲ್ಲ ಅಂತ ನಿರಾಸೆ ಪಡೋರಿಗೆ ಕೇರಳದ ಜೈಲು ಪ್ರಾಧಿಕಾರ ಸಂತಸದ ಸುದ್ದಿಯೊಂದನ್ನು ನೀಡಿದೆ.

ಜೈಲಿನ ಆಹಾರ, ಅದರಲ್ಲೂ ಎಲ್ಲರು ಇಷ್ಟಪಡುವ ಬಿರಿಯಾನಿಯನ್ನೇ ಜೈಲಿಗೆ ಹೋಗದೆಯೇ ಮನೆಯಲ್ಲೇ ಕುಳಿತು ಸವಿಯಲು ಕೇರಳ ಜೈಲು ಪ್ರಾಧಿಕಾರ ಹೊಸದೊಂದು ನಿರ್ಧಾರ ಕೈಗೊಂಡಿದೆ.

ಆನ್‌ಲೈನ್‌ ಫುಡ್ ಜನಪ್ರಿಯತೆಯನ್ನು ಮನಗಂಡಿರುವ ಕೇರಳದ ಜೈಲು ಪ್ರಾಧಿಕಾರ ಜೈಲಿನಲ್ಲಿಯೇ ತಯಾರಿಸುವ ರುಚಿಯಾದ ಬಿರಿಯಾನಿಯನ್ನು ಆನ್‌ಲೈನ್ ಮೂಲಕ ಮಾರಲು ನಿರ್ಧರಿಸಿದೆ. ಇದರಿಂದ ಯಾರಿಗೆಷ್ಟು ಖಷಿಯಾಗುವುದೋ ಗೊತ್ತಿಲ್ಲ. ಬಿರಿಯಾನಿ ಪ್ರಿಯರಂತೂ ಫುಲ್ ಖುಷಿಯಾಗಿದ್ದು, ಜೈಲಿನ ಬಿರಿಯಾನಿಯ ರುಚಿಯನ್ನು ಮನೆಯಲ್ಲೇ ಕುಳಿತು ಸವಿಯಲಿದ್ದಾರೆ.

ಸ್ವಿಗ್ಗಿಯೊಂದಿಗೆ ಒಪ್ಪಂದ:

ಮೊದಲ ಹಂತದಲ್ಲಿ ಬಿರಿಯಾನಿ ಕಾಂಬೋ ಮಾರಾಟ ಮಾಡಲು ನಿರ್ಧರಿಸಲಾಗಿದೆ. ಜೈಲಿನಿಂದ ಅಗತ್ಯವಿರುವವರಿಗೆ ಬಿರಿಯಾನಿ ತಲುಪಿಸಲು ಜನಪ್ರಿಯ ಆನ್‌ಲೈನ್ ಫುಡ್ ಮಾರಾಟ ಸಂಸ್ಥೆ ಸ್ವಿಗ್ಗಿಯೊಂದಿಗೆ ಈಗಾಗಲೇ ಜೈಲು ಪ್ರಾಧಿಕಾರ ಒಪ್ಪಂದವನ್ನೂ ಮಾಡಿಕೊಂಡಿದೆ.

ಜೈಲ್ ಬಿರಿಯಾನಿ ಕಾಂಬೋದಲ್ಲಿ ಏನೇನಿದೆ..?

ಆನ್‌ಲೈನ್‌ ಮಾರಾಟಕ್ಕೆಂದೇ ವಿಶೇಷವಾಗಿ ಬಿರಿಯಾನಿ ಕಾಂಬೋ ರೂಪಿಸಲಾಗಿದೆ. ಇದರಲ್ಲಿ 300 ಗ್ರಾಂ ಬಿರಿಯಾನಿ ರೈಸ್, ಒಂದು ರೋಸ್ಟೆಡ್ ಚಿಕನ್ ಲೆಗ್‌ಪೀಸ್, ಮೂರು ಚಪಾತಿ, ಒಂದು ಕಪ್‌ ಕೇಕ್‌, ಸಲಾಡ್, ಉಪ್ಪಿನಕಾಯಿ, ಒಂದು ಲೀಟರ್‌ನ ನೀರಿನ ಬಾಟಲ್ ಇರಲಿದೆ. ಹಾಗೆಯೇ ಬಿರಿಯಾನಿ ಸವಿಯಲು ಒಂದು ಬಾಳೆ ಎಲೆಯನ್ನೂ ಕೊಡಲು ವಿಯ್ಯೂರ್ ಕೇಂದ್ರ ಕಾರಾಗೃಹ ಪ್ರಾಧಿಕಾರ ನಿರ್ಧರಿಸಿದೆ.

ಈ ದೇಗುಲದಲ್ಲಿ 'ಮಟನ್ ಬಿರಿಯಾನಿ'ಯೇ ಪ್ರಸಾದ!