ಅತ್ಯಾಚಾರಕ್ಕೆ ಒಳಗಾದ ಸನ್ಯಾಸಿನಿ ವೇಶ್ಯೆ : ಶಾಸಕ

https://static.asianetnews.com/images/authors/56bf5dcb-7868-50e0-b2d0-38391a34809d.jpg
First Published 10, Sep 2018, 11:34 AM IST
Kerala Independent MLA P C George calls sexually assaulted nun prostitute
Highlights

ಅತ್ಯಾಚಾರಕ್ಕೆ ಒಳಗಾದ ಸನ್ಯಾಸಿಯೋರ್ವರನ್ನು ವೇಶ್ಯೆ ಎನ್ನುವ ಮೂಲಕ ಶಾಸಕರೋರ್ವರು ವಿವಾದಕ್ಕೆ ಒಳಗಾಗಿದ್ದಾರೆ. 12  ಬಾರಿ ಆಕೆ ದೌರ್ಜನ್ಯಕ್ಕೆ ಒಳಗಾದಾಗ ಆಕೆ ಸುಮ್ಮನಿದ್ದು, 13 ನೇ ಬಾರಿ ಅದು ಅತ್ಯಾಚಾರ ಎಂದು ಆರೋಪಿಸಿದ್ದಾಳೆ. ಆಕೆ ಯಾಕೆ ಮೊದಲನೇ ಬಾರಿಯೇ ದೂರು ನೀಡಲಿಲ್ಲ ಎಂದು ಪ್ರಶ್ನೆ ಮಾಡಿದ್ದಾರೆ. 

ತಿರುವನಂತಪುರಂ: ತನ್ನ ಮೇಲೆ ಅತ್ಯಾಚಾರ ಎಸಗಿದ ಜಲಂಧರ್ ಮೂಲದ ಬಿಷಪ್ ಬಂಧನಕ್ಕೆ ಒತ್ತಾಯಿಸಿರುವ ಕ್ರೈಸ್ತ ಸನ್ಯಾಸಿನಿಯನ್ನು ವೇಶ್ಯೆ ಎಂದು ಹೇಳುವ ಮೂಲಕ ಕೇರಳದ ಶಾಸಕರೊಬ್ಬರು ವಿವಾದಕ್ಕೆ ಕಾರಣರಾಗಿದ್ದಾರೆ. ‘ಆ ಕ್ರೈಸ್ತ ಸನ್ಯಾಸಿನಿ ವೇಶ್ಯೆ ಎಂಬುದರಲ್ಲಿ ಯಾರೊಬ್ಬರಿಗೂ ಸಂಶಯವಿಲ್ಲ. 

12  ಬಾರಿ ಆಕೆ ದೌರ್ಜನ್ಯಕ್ಕೆ ಒಳಗಾದಾಗ ಆಕೆ ಸುಮ್ಮನಿದ್ದು, 13 ನೇ ಬಾರಿ ಅದು ಅತ್ಯಾಚಾರ ಎಂದು ಆರೋಪಿಸಿದ್ದಾಳೆ. ಆಕೆ ಯಾಕೆ ಮೊದಲನೇ ಬಾರಿಯೇ ದೂರು ನೀಡಲಿಲ್ಲ?’ ಎಂದು ಪಕ್ಷೇತರ ಶಾಸಕ ಪಿ.ಸಿ. ಜಾರ್ಜ್ ಪ್ರಶ್ನಿಸಿ ದ್ದಾರೆ. ಪಂಜಾಬ್‌ನ ಜಲಂಧರ್‌ನಲ್ಲಿರುವ ಬಿಷಪ್ ವಿರುದ್ಧ ಅತ್ಯಾಚಾರ ಪ್ರಕರಣ ಕ್ರೈಸ್ತ ಸನ್ಯಾಸಿನಿ ಜುಲೈನಲ್ಲಿ ದಾಖಲಿಸಿದ್ದರು. 

ಕೇರಳಕ್ಕೆ ಆಗಮಿಸುತ್ತಿದ್ದ ಬಿಷಪ್, ಹಲವು ಬಾರಿ ತನ್ನ ಮೇಲೆ ಅತ್ಯಾಚಾರ ಎಸಗಿದ್ದಾರೆ ಎಂದು ಅವರು ಆಪಾದಿಸಿದ್ದಾರೆ. ಬಿಷಪ್ ತನಿಖೆಗಾಗಿ ಪೊಲೀಸರು ಪಂಜಾಬ್‌ಗೆ ತೆರಳಿದ್ದರಾದರೂ, ಅವರ ಬಂಧನ ನಡೆದಿಲ್ಲ. ಹೀಗಾಗಿ ಆಕೆ ಹೈಕೋರ್ಟ್ ಮೆಟ್ಟಿಲೇರಲು ನಿರ್ಧರಿಸಿದ್ದಾರೆ.

loader