Asianet Suvarna News Asianet Suvarna News

ಡಿಯರ್ ಹೆಚ್ಡಿಕೆ ಕೇರಳದಲ್ಲಿ ಪೆಟ್ರೋಲ್ ಬೆಲೆ 1 ರೂ. ಕಡಿತ

ದೇಶದ ಅತೀ ದೊಡ್ಡ ಸಗಟು ಇಂಧನ ಸಂಸ್ಥೆ ಇಂಡಿಯನ್ ಆಯಿಲ್ ಕಾರ್ಪೋರೇಷನ್ 1 ಪೈಸೆ ಮಾತ್ರ ಕಡತಗೊಳಿಸಿತ್ತು. ಪಂಜಾಬ್ ಹಾಗೂ ಮಹಾರಾಷ್ಟ್ರ ಬಿಟ್ಟರೆ  ಕೇರಳದಲ್ಲಿ ಮಾತ್ರ  ಇಂಧನಗಳ ಮೇಲೆ ಅತಿ ಹೆಚ್ಚು ತೆರಿಗೆ ವಿಧಿಸಲಾಗುತ್ತಿತ್ತು.  

Kerala government to cut petrol, diesel prices by Re 1

ನವದೆಹಲಿ(ಮೇ.30): ಪೆಟ್ರೋಲ್ ಹಾಗೂ ಡಿಸೇಲ್ ಬೆಲೆಯನ್ನು ಕೇರಳ ಸರ್ಕಾರ ಪ್ರತಿ ಲೀಟರ್'ಗೆ 1 ರೂ. ಕಡಿತಗೊಳಿಸಲು ನಿರ್ಧರಿಸಿದೆ.
ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಆದೇಶ ಹೊರಡಿಸಿದ್ದು ಜೂನ್ 1 ರಿಂದ ಅಧಿಕೃತವಾಗಿ ಜಾರಿಗೆ ಬರಲಿದೆ. ಹಲವು ರಾಜ್ಯಗಳು ಪೆಟ್ರೋಲ್ ಹಾಗೂ ಡಿಸೇಲ್ ಮೇಲೆ ಕೇಂದ್ರ ಸರ್ಕಾರ ವಿಧಿಸಿರುವ ಸುಂಕದ ಮೇಲೆ ಮೌಲ್ಯಾಧಾರಿತ ತೆರಿಗೆಯನ್ನು ವಿಧಿಸಿವೆ. ಕೇರಳ ರಾಜ್ಯ ಹೆಚ್ಚುವರಿ ತೆರಿಗೆಯನ್ನು ಕಡಿಮೆಗೊಳಿಸಿದ ಹಿನ್ನಲೆಯಲ್ಲಿ 1 ರೂ. ಕಡಿಮೆಯಾಗಲಿದೆ.
ದೇಶದ ಅತೀ ದೊಡ್ಡ ಸಗಟು ಇಂಧನ ಸಂಸ್ಥೆ ಇಂಡಿಯನ್ ಆಯಿಲ್ ಕಾರ್ಪೋರೇಷನ್ 1 ಪೈಸೆ ಮಾತ್ರ ಕಡತಗೊಳಿಸಿತ್ತು. ಪಂಜಾಬ್ ಹಾಗೂ ಮಹಾರಾಷ್ಟ್ರ ಬಿಟ್ಟರೆ  ಕೇರಳದಲ್ಲಿ ಮಾತ್ರ  ಇಂಧನಗಳ ಮೇಲೆ ಅತಿ ಹೆಚ್ಚು ತೆರಿಗೆ ವಿಧಿಸಲಾಗುತ್ತಿತ್ತು.  
ರೈತರ ಸಾಲ ಮನ್ನಾ ಮಾಡಲು ಹೆಚ್ಚು ಆಸಕ್ತಿ ವಹಿಸುತ್ತಿರುವ ಮುಖ್ಯಮಂತ್ರಿ  ಹೆಚ್‌.ಡಿ. ಕುಮಾರಸ್ವಾಮಿ ನೇತೃತ್ವದ ಜೆಡಿಎಸ್-ಕಾಂಗ್ರೆಸ್ ಸರಕಾರ ಸಾರ್ವಜನಿಕರಿಗೆ ಹೊರೆಯಾಗುತ್ತಿರುವ ಇಂಧನ ಬೆಲೆಯನ್ನು ಕಡಿಮೆಗೊಳಿಸುತ್ತಾರಾ ಕಾದು ನೋಡಬೇಕಿದೆ.

Follow Us:
Download App:
  • android
  • ios