ಹೆಚ್ಚುವರಿ ಮುಖ್ಯಕಾರ್ಯದರ್ಶಿ ಪಿ.ಎಚ್. ಕುರಿಯನ್ ನೇತೃತ್ವದ ನಾಲ್ವರು ಸದಸ್ಯರ ಸಮಿತಿ ವಿಮಾನ ನಿಲ್ದಾಣಕ್ಕೆ ಚೆರುವಾರಿ ಎಸ್ಟೇಟ್ ಅನ್ನು ಶಿಫಾರಸು ಮಾಡಿತ್ತು.
ತಿರುವನಂತಪುರಂ(ಜು.19): ಶಬರಿಮೆಲೆ ಅಯ್ಯಪ್ಪ ಸ್ವಾಮಿ ದೇವಾಲಯಕ್ಕೆ ಆಗಮಿಸುವ ಭಕ್ತರಿಗೆ ವಿಮಾನಯಾನ ಸಂಪರ್ಕ ಕಲ್ಪಿಸಲು ಕೊಟ್ಟಾಯಂ ಜಿಲ್ಲೆಯ ಚೆರುವಾಲಿ ಎಸ್ಟೇಟ್‌ನಲ್ಲಿ ವಿಮಾನ ನಿಲ್ದಾಣವೊಂದನ್ನು ನಿರ್ಮಿಸಲು ಕೇರಳ ಸರ್ಕಾರ ಬುಧವಾರ ನಿರ್ಧರಿಸಿದೆ.
ಶಬರಿಮಲೆಯಿಂದ 48 ಕಿ.ಮೀ. ದೂರದಲ್ಲಿರುವ ಕಂಜಿರಾಪಲ್ಲಿಯಲ್ಲಿರುವ ಚೆರುವಾಲಿ ಎಸ್ಟೇಟ್ 2263 ಎಕರೆ ಪ್ರದೇಶಕ್ಕೆ ವ್ಯಾಪಿಸಿದೆ. ಹೆಚ್ಚುವರಿ ಮುಖ್ಯಕಾರ್ಯದರ್ಶಿ ಪಿ.ಎಚ್. ಕುರಿಯನ್ ನೇತೃತ್ವದ ನಾಲ್ವರು ಸದಸ್ಯರ ಸಮಿತಿ ವಿಮಾನ ನಿಲ್ದಾಣಕ್ಕೆ ಚೆರುವಾರಿ ಎಸ್ಟೇಟ್ ಅನ್ನು ಶಿಫಾರಸು ಮಾಡಿತ್ತು. ಎಸ್ಟೇಟ್‌ನ ಮಾಲೀಕತ್ವ ‘ಬಿಲೀವರ್ಸ್ ಚರ್ಚ್’ಗೆ ಸೇರಿದ್ದಾಗಿದೆ ಎನ್ನಲಾಗಿದೆ.
