Asianet Suvarna News Asianet Suvarna News

ಕೇರಳ ಪ್ರವಾಹ : ಈ ರಾಜ್ಯಗಳಿಗೆ ಚಿನ್ನದ ಮೊಟ್ಟೆಯಾಗಿದ್ದು ಹೇಗೆ..?

ಕೇರಳದಲ್ಲಿ ಭಾರೀ ಪ್ರಮಾಣದಲ್ಲಿ ಪ್ರವಾಹ ಪರಿಸ್ಥಿತಿ ನಿರ್ಮಾಣವಾಗಿದ್ದು ಇದು ಬೇರೆ ರಾಜ್ಯಗಳಲ್ಲಿ ಲಾಭವನ್ನೇ ತಂದಿರಿಸಿದೆ. ಬೇರೆ ಉತ್ಪಾದನೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತಿರುವ ರಾಜ್ಯಗಳಿಗೆ ಅಗತ್ಯ ವಸ್ತುಗಳಿಗೆ ಬೇಡಿಕೆ ಹೆಚ್ಚಿನ ಪ್ರಮಾಣದಲ್ಲಿ ಬರುತ್ತಿದ್ದು, ಇದರಿಂದ ಪೂರೈಕೆಯೂ ಕೂಡ ಅಧಿಕವಾಗಿದೆ. 

Kerala Floods How Other States Benefit
Author
Bengaluru, First Published Sep 20, 2018, 12:59 PM IST | Last Updated Sep 20, 2018, 1:03 PM IST

ತಿರುವನಂತಪುರ :  ಕೇರಳದಲ್ಲಿ ಭಾರೀ ಪ್ರವಾಹ ಪರಿಸ್ಥಿತಿ ನಿರ್ಮಾಣವಾಗಿ, ಇದರಿಂದ ಇಲ್ಲಿನ ಜನಜೀವನ ತತ್ತರಿಸಿದ್ದು, ಸದ್ಯ ಚೇತರಿಸಿಕೊಳ್ಳುತ್ತಿದೆ.

ಜೀವನವನ್ನು ಪುನಃ ರೂಪಿಸಿಕೊಳ್ಳಲು ಪರದಾಡುತ್ತಿದ್ದು ಇದೇ ವೇಳೆ ಹಲವು  ವ್ಯವಹಾರಗಳು  ಇದೇ ಸಂದರ್ಭದಲ್ಲಿ ಕುದುರಿವೆ.

ಇಲ್ಲಿನ ಮನೆಗಳು ಸಂಪೂರ್ಣವಾಗಿ ನೆಲಕಚ್ಚಿದ್ದು, ಮತ್ತೆ ನಿರ್ಮಾಣ ಕಾಮಾಗರಿಗಳು ಬರದಿಂದ ಸಾಗಿವೆ. ಮತ್ತೆ ಜೀವನವನ್ನು ರೂಪಿಸಿಕೊಳ್ಳಲು ಅಗತ್ಯ ವಸ್ತುಗಳಿಗೆ ಬೇಡಿಕೆಯು ಅತ್ಯಧಿಕ ಪ್ರಮಾಣದಲ್ಲಿ ಹೆಚ್ಚಳವಾಗಿದೆ. 

ಪ್ರಮುಖವಾಗಿ ಮನೆ ನಿರ್ಮಾಣ ಕಾಮಗಾರಿ ಹೆಚ್ಚಿನ ಪ್ರಮಾಣದಲ್ಲಿ ನಡೆಯುತ್ತಿದ್ದು ಇದರಿಂದ ಇಟ್ಟಿಗೆ ಉತ್ಪಾದನೆ ಪ್ರಮಾಣದಲ್ಲಿ ಹೆಚ್ಚಳವಾಗಿ ವ್ಯವಹಾರ ಅಧಿಕವಾಗಿದೆ. ಇನ್ನು ಕಚ್ಚಾ ವಸ್ತುಗಳ ಬೇಡಿಕೆಯೂ ಹೆಚ್ಚಿದ ಪರಿಣಾಮ ಇದರಿಂದ ತಮಿಳುನಾಡು ಹಾಗೂ ಹೈದ್ರಾಬಾದ್ ಗಳಲ್ಲಿ ಅತ್ಯಧಿಕ ಪ್ರಮಾಣದಲ್ಲಿ  ವ್ಯವಹಾರವು ಹೆಚ್ಚಿದೆ

ಇಷ್ಟೇ ಅಲ್ಲದೇ ನಿತ್ಯ ಮನೆ ಬಳಕೆಗೆ ಬೇಕಾದ ಅಗತ್ಯ ಸಾಮಾಗ್ರಿಗಳಿಗೂ ಕೂಡ ಕೇರಳದಲ್ಲಿ ರಾಜ್ಯದಲ್ಲಿ ಬೇಡಿಕೆ ಅತೀ ಹೆಚ್ಚಳವಾಗಿದೆ.  

ಬೇಡಿಕೆ ಹೆಚ್ಚಳವಾದಾಗ ಪೂರೈಕೆಯೂ ಕೂಡ ಹೆಚ್ಚಿದ್ದು, ಉತ್ಪಾದನೆ ಪ್ರಮಾಣದಲ್ಲಿಯೂ ಕೂಡ ಏರಿಕೆಯಾಗಿದೆ. ಪ್ರಮುಖವಾಗಿ, ಫ್ಯಾನ್ ಫ್ರಿಜ್, ಪಾತ್ರೆ, ಬಟ್ಟೆ ಸೇರಿದಂತೆ ಪ್ರತೀ ವಸ್ತುಗಳಿಗೂ ಬೇಡಿಕೆ ಹೆಚ್ಚಿದೆ.

ಇನ್ನು ಮಹಾರಾಷ್ಟ್ರದಿಂದ ವಾಟರ್ ಹೀಟರ್ಗಳು, ತಮಿಳುನಾಡಿನಿಂದ ವಾಟರ್ ಪಂಪ್ ಸೇರಿದಂತೆ ಗೋವಾ, ದಿಲ್ಲಿ, ಉತ್ತರಾಖಂಡ್, ಆಂಧ್ರ ಪ್ರದೇಶ ಸೇರಿ ವಿವಿಧ ರಾಜ್ಯಗಳಿಂದ ವಿವಿಧ ಸಾಮಾಗ್ರಿಗಳ ಉತ್ಪಾದನೆ ಹೆಚ್ಚಳವಾಗಿದ್ದು, ಪೂರೈಕೆಯೂ ಕೂಡ ಅಧಿಕವಾಗಿದೆ.  

ಈ ಹಿಂದೆ ಕೆಲವು ಅಗತ್ಯ ವಸ್ತುಗಳು 30 ಟ್ರಕ್ ಪ್ರಮಾಣದಲ್ಲಿ ಪೂರೈಕೆಯಾಗುತ್ತಿದ್ದರೆ  ಇದೀಗ 90 ಟ್ರಕ್ ಗಳಷ್ಟು  ಬೇಡಿಕೆ ಹೆಚ್ಚಳವಾಗಿದೆ ಎಂದು ಪೂರೈಕೆದಾರರು ಹೇಳುತ್ತಿದ್ದಾರೆ.  

Latest Videos
Follow Us:
Download App:
  • android
  • ios