ಕೇರಳದ ಮಹಾಮಳೆಗೆ  ಅಪಾರ ಪ್ರಮಾಣದ ಹಾನಿಯಾಗಿದೆ. ನೂರಾರು ಮಂದಿ ಜೀವ ಕಳೆದುಕೊಂಡಿದ್ದಾರೆ. ಒಂದು ಕಡೆ ಪರಿಹಾರ ಕಾರ್ಯ ಜೋರಾಗಿ ನಡೆಯುತ್ತಿದ್ದರೂ ಇನ್ನೊಂದು  ಕಡೆ ಮಳೆ ಮಾತ್ರ ಆರ್ಭಟಿಸುವುದನ್ನು ಕಡಿಮೆ ಮಾಡಿಲ್ಲ. ಆದರೆ ಏಶಿಯಾನೆಟ್ ನ್ಯೂಸ್ ಮಾತ್ರ ಮಳೆ ವರದಿಗಳನ್ನು ನಿರಂತರವಾಗಿ ಬಿತ್ತರ ಮಾಡುತ್ತಿದ್ದು ಸಮಸ್ಯೆಗಳಿಗೆ ಸ್ಪಂದಿಸುವ ಕೆಲಸ ಮಾಡುತ್ತಲೇ ಬಂದಿದೆ. 

ಬೆಂಗಳೂರು[ಆ.16]  ಕೇರಳದ ಮಹಾಮಳೆಗೆ ಸದಾ ಸ್ಪಂದಿಸುತ್ತಲೇ ಬಂದಿರುವ ಏಶಿಯಾನೆಟ್ ನ್ಯೂಸ್ ಗೆ ಮೆಚ್ಚುಗೆ ಸೂಚಿಸಿರುವ ಕಾಂಗ್ರೆಸ್ ಮುಖಂಡ ಶಶಿ ತರೂರ್ ಕಾರ್ಯವನ್ನು ಶ್ಲಾಘಿಸಿದ್ದಾರೆ. ಜಾಹೀರಾತು ಬ್ರೇಕ್ ಗಳನ್ನು ಪಕ್ಕಕ್ಕಿಟ್ಟು ಸಂಸ್ಥೆ ನೊಂದವರಿಗೆ ನ್ಯಾಯ ಒದಗಿಸಿಕೊಡುತ್ತಿದೆ ಎಂದು ಹೇಳಿದ್ದಾರೆ.

ಈ ಬಗ್ಗೆ ಟ್ವೀಟ್ ಮಾಡಿರುವ ಶಶಿ ತರೂರ್ ಏಷಿಯಾನೆಟ್ ನ್ಯೂಸ್ ನ್ನು ಕೊಂಡಾಡಿದ್ದಾರೆ. ಮಾಧ್ಯಮಗಳು ಇದೆ ಬಗೆಯಲ್ಲಿ ಕೆಲಸ ಮಾಡಬೇಕು ಎಂದು ಹೇಳಿದ್ದಾರೆ.

ಕೇರಳದಲ್ಲಿ ವರುಣನ ಆರ್ಭಟ ನಿಂತಿಲ್ಲ. 4-5 ದಿನಗಳಿಂದೀಚೆಗೆ ಮಳೆಯಿಂದಾಗಿ 67ಕ್ಕೇರಿದೆ. ಪ್ರಧಾನಿ ಮೋದಿ ಮತ್ತು ಕೇರಳ ಸಿಎಂ ಪಿಣರಾಯಿ ವಿಜಯನ್‌ ಮಾತುಕತೆ ನಡೆಸಿದ್ದಾರೆ. ಈ ಸಂದರ್ಭದಲ್ಲಿ ಪ್ರಯಾಣಿಕರ ಅನುಕೂಲಕ್ಕೆ ಲಘು ವಿಮಾನಗಳನ್ನು ಬಳಕೆಗೆ ಪರವಾನಿಗೆ ನೀಡುವಂತೆ ಮನವಿ ಮಾಡಿದ್ದಾರೆ.

Scroll to load tweet…