ಮೋಹನ್ ಲಾಲ್ ವಿರುದ್ಧ ನಾನು ಸಹಿ ಹಾಕಿಲ್ಲ: ಪ್ರಕಾಶ್ ರೈ

https://static.asianetnews.com/images/authors/56bf5dcb-7868-50e0-b2d0-38391a34809d.jpg
First Published 24, Jul 2018, 5:02 PM IST
Kerala Film award row Prakash rai clarifies about signing memorandum against Mohanlal
Highlights

ಮಲಯಾಳಂ ಚಿತ್ರರಂಗದ ಸುತ್ತ ವಿವಾದ ಎದ್ದಿದೆ. ಖ್ಯಾತ ನಟ ಮೋಹನ್  ಲಾಲ್’ರನ್ನು ಚಲನಚಿತ್ರ ಪ್ರದಾನ ಸಮಾರಂಭಕ್ಕೆ ಕರೆಯಬಾರದೆಂದು ಮುಖ್ಯಮಂತ್ರಿಗಳಿಗೆ ಮನವಿ ಪತ್ರ ಸಲ್ಲಿಸಲಾಗಿತ್ತು. ಇದರಲ್ಲಿ ಪ್ರಕಾಶ್ ರೈ ಹೆಸರು ಕೇಳಿ ಬಂದಿತ್ತು. ಈ ಬಗ್ಗೆ ಖುದ್ದು ಪ್ರಕಾಶ್ ರೈ ಸ್ಪಷ್ಟೀಕರಣ ಕೊಟ್ಟಿದ್ದಾರೆ. 

ಕೇರಳ (ಜು. 24): ರಾಜ್ಯ ಚಲನಚಿತ್ರ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಭಾಗವಹಿಸುವ ಗಣ್ಯರ ಪಟ್ಟಿಯಲ್ಲಿ ಮೋಹನ್ ಲಾಲ್ ಹೆಸರನ್ನು ಸೇರಿಸಬಾರದೆಂದು ಮುಖ್ಯಮಂತ್ರಿಗೆ ಸಾಮೂಹಿಕ ಪತ್ರ ಬರೆದು ಒತ್ತಾಯಿಸಿದ್ದು ಭಾರೀ ಸುದ್ದಿಯಾಗಿತ್ತು.

ಈ ಪತ್ರಕ್ಕೆ 105 ಮಂದಿ ಸಹಿ ಹಾಕಿದ್ದರು. ಅದರಲ್ಲಿ ಪ್ರಕಾಶ್ ರೈ ಕೂಡಾ ಇದ್ದಾರೆ ಎಂದು ಕೇಳಿ ಬಂದಿತ್ತು. ಈ ಬಗ್ಗೆ ಪ್ರಕಾಶ್ ರೈ ಟ್ವಿಟರ್’ನಲ್ಲಿ ಸ್ಪಷ್ಟೀಕರಣ ಕೊಟ್ಟಿದ್ದಾರೆ. ನಾನು ಯಾವುದೇ ಮನವಿ ಪತ್ರಕ್ಕೆ ಸಹಿ ಹಾಕಿಲ್ಲ. ನನಗೆ ಏನೂ ಗೊತ್ತಿಲ್ಲ ಎಂದಿದ್ದಾರೆ. 

 

loader