Asianet Suvarna News Asianet Suvarna News

ಬದುಕಿ ಬರುತ್ತಾನೆಂಬ ನಂಬಿಕೆಯಿಂದ 3 ತಿಂಗಳಿಂದ ಹೆಣಕ್ಕೆ ಮನೆಯಲ್ಲೇ ಪೂಜೆ

ಮಲ್ಲಾಪುರಂ'ನ ಮನೆಯೊಂದರಲ್ಲಿ ಧಾರ್ಮಿಕ ಶಿಕ್ಷಕನಾಗಿ ಕಾರ್ಯ ನಿರ್ವಹಿಸುತ್ತಿದ್ದ ವಿ. ಸಯ್ಯದ್(50) 3 ತಿಂಗಳ ಹಿಂದೆ ಮೃತಪಟ್ಟಿದ್ದರು. ಮತ್ತೆ ಜೀವಸಹಿತ ಎದ್ದೇಳುತ್ತಾನೆಂದು ನಂಬಿದ ಮೃತನ ಪತ್ನಿ,ಇಬ್ಬರು ಪುತ್ರರು ಹಾಗೂ ಓರ್ವ ಪುತ್ರಿ ಮೃತದೇಹವನ್ನು ಮನೆಯಲ್ಲಿಟ್ಟುಕೊಂಡು  ಮಂತ್ರ ಪಠಣಗಳೊಂದಿಗೆ ಪೂಜೆ ಮಾಡುತ್ತಿದ್ದರು.

Kerala Family Keeps Dead Mans Body In House For 3 Months
  • Facebook
  • Twitter
  • Whatsapp

ಮಲ್ಲಾಪುರಂ(ಜು.07): ಕುಟುಂಬವೊಂದು ಸತ್ತ ವ್ಯಕ್ತಿಯನ್ನು ಹೂಳದೆ ಬದುಕಿ ಬರುತ್ತಾನೆಂಬ ನಂಬಿಕೆಯಿಂದ 3 ತಿಂಗಳಿಂದ ಪೂಜೆ ಮಾಡುತ್ತಿರುವ ಘಟನೆ ಕೇರಳದ ಮಲ್ಲಾಪುರಂ'ನಲ್ಲಿ ನಡೆದಿದೆ.

ಮಲ್ಲಾಪುರಂ'ನ ಮನೆಯೊಂದರಲ್ಲಿ ಧಾರ್ಮಿಕ ಶಿಕ್ಷಕನಾಗಿ ಕಾರ್ಯ ನಿರ್ವಹಿಸುತ್ತಿದ್ದ ವಿ. ಸಯ್ಯದ್(50) 3 ತಿಂಗಳ ಹಿಂದೆ ಮೃತಪಟ್ಟಿದ್ದರು. ಮತ್ತೆ ಜೀವಸಹಿತ ಎದ್ದೇಳುತ್ತಾನೆಂದು ನಂಬಿದ ಮೃತನ ಪತ್ನಿ,ಇಬ್ಬರು ಪುತ್ರರು ಹಾಗೂ ಓರ್ವ ಪುತ್ರಿ ಮೃತದೇಹವನ್ನು ಮನೆಯಲ್ಲಿಟ್ಟುಕೊಂಡು  ಮಂತ್ರ ಪಠಣಗಳೊಂದಿಗೆ ಪೂಜೆ ಮಾಡುತ್ತಿದ್ದರು.

ಸಂಬಂಧಿಕರೊಬ್ಬರು ದೂರು ನೀಡಿದ ಪರಿಣಾಮ  ಸ್ಥಳೀಯ ಶಾಸಕನೊಬ್ಬನ ನೇತೃತ್ವದಲ್ಲಿ ಪೊಲೀಸರು ಮೃತದೇಹವಿದ್ದ ಮನೆಯ ಬಾಗಿಲನ್ನು ತೆಗಿಸಿ ನೋಡಿದಾಗ ಘಟನೆ ಬೆಳಕಿದೆ ಬಂದಿದೆ. ಆಗಾಗಲೇ ದೇಹ ಪೂರ್ತಿ ಕೊಳೆತು ಹೋಗಿ ದುರ್ನಾತ ಬೀರುತ್ತಿತ್ತು. ಈ ಕುಟುಂಬ ಸ್ಥಳೀಯರೊಂದಿಗೆ ಮನಸ್ಥಾಪ ಹೊಂದಿ ಯಾರ ಜೊತೆಗೂ ಹೆಚ್ಚು ಬೆರೆಯದ ಕಾರಣ ವಿಷಯ ಬೇಗ ಬೆಳಕಿಗೆ ಬಂದಿರಲಿಲ್ಲ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ನೀಡಲಾಗಿದ್ದು, ವರದಿ ಬಂದ ನಂತರ ಹೆಚ್ಚಿನ ತನಿಖೆ ನಡೆಸಲಾಗುತ್ತದೆ ಎಂದು ಪೊಲೀಸರು ತಿಳಿಸಿದ್ದಾರೆ.

Follow Us:
Download App:
  • android
  • ios