ಹುಡುಗಿಯರ ಸ್ತನಗಳನ್ನು ಕಲ್ಲಂಗಡಿ ಹಣ್ಣಿಗೆ ಹೋಲಿಸಿದ್ದ ಪ್ರಾಧ್ಯಾಪಕನ ವಿರುದ್ಧ ದೂರು ದಾಖಲು

First Published 23, Mar 2018, 7:33 PM IST
Kerala college teacher booked for comparing women breasts to melons
Highlights
  • ಹುಡುಗಿಯರ ಸ್ತನಗಳನ್ನು ಕಲ್ಲಂಗಡಿ ಹಣ್ಣಿಗೆ ಹೋಲಿಸಿದ್ದ ಕೇರಳದ ಪ್ರಾಧ್ಯಾಪಕ
  • ಇಂದಿನ ಹುಡುಗಿಯರು ಸರಿಯಾಗಿ ವಸ್ತ್ರ ಧರಿಸಲ್ಲ ಎಂದಿದ್ದ

ಕಲ್ಲಿಕೋಟೆ: ಹುಡುಗಿಯರ ಸ್ತನಗಳನ್ನು ಕಲ್ಲಂಗಡಿ ಹಣ್ಣಿಗೆ ಹೋಲಿಸಿದ್ದ ಕೇರಳದ ಪ್ರಾಧ್ಯಾಪಕನ ವಿರುದ್ಧ ಕೊನೆಗೂ ಪೊಲೀಸರು ದೂರು ದಾಖಲಿಸಿದ್ದಾರೆ.

ಕಾಲೇಜಿನ ವಿದ್ಯಾರ್ಥಿನಿ ಅಮೃತಾ ಈ ಬಗ್ಗೆ ದೂರು ನೀಡಿದ್ದಾರೆ. ಲೈಂಗಿಕ ಕಿರುಕುಳ, ಹಾಗೂ ಕೀಳು ಭಾಷೆಯ ಬಳಸಿ ಮಹಿಳೆಯ ಗೌರವಕ್ಕೆ ಧಕ್ಕೆ, ಮಹಿಳೆಗೆ ಅವಮಾನ ಮಾಡಿದ್ದಾರೆಂದು ಆರೋಪಿಸಲಾಗಿದೆ.

ಕಲ್ಲಿಕೋಟೆಯ ಫಾರೂಕ್ ಕಾಲೇಜಿನ ಸಹಾಯಕ ಪ್ರಾಧ್ಯಾಪಕ ಜೌಹರ್ ಮುನವ್ವಿರ್, ಇಂದಿನ ಹುಡುಗಿಯರು ಸರಿಯಾಗಿ ವಸ್ತ್ರ ಧರಿಸಲ್ಲ, ತುಂಡರಿಸಿದ ಕಲ್ಲಂಗಡಿ ಹಣ್ಣನ್ನು ಪ್ರದರ್ಶನಕ್ಕಿಟ್ಟ ತರಹ ತಮ್ಮ ಎದೆಯನ್ನು ಪ್ರದರ್ಶಿಸುತ್ತಾರೆ, ಎಂದು ಹೇಳಿದ್ದ ವಿಡಿಯೋ ವೈರಲ್ ಆಗಿತ್ತು. ಅದರ ಬೆನ್ನಲ್ಲೇ ಕೇರಳಾದ್ಯಂತ ಪ್ರತಿಭಟನೆಗಳು ನಡೆದಿದ್ದುವು..

ರೊಚ್ಚಿಗೆದ್ದ ವಿದ್ಯಾರ್ಥಿನಿಯರು ಕಾಲೇಜಿಗೆ ‘ವಾಟರ್ ಮೆಲನ್ ಮಾರ್ಚ್’ ಮೂಲಕ ಪ್ರತಿಭಟಿಸಿದ್ದರು. 

ಕೆಲ ಯುವತಿಯರು, ತಮ್ಮ ಟಾಪ್ ಲೆಸ್ ಫೋಟೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡಿ ಪ್ರತಿಭಟಿಸಿದ್ದು ಭಾರೀ ಸುದ್ದಿಯಾಗಿತ್ತು.

loader