ಅನಾರೋಗ್ಯದ ಸಮಸ್ಯೆ: ಕೇರಳ ಸಿಎಂ ಚೆನ್ನೈ ಆಸ್ಪತ್ರೆಗೆ ದಾಖಲು

First Published 3, Mar 2018, 4:56 PM IST
Kerala CM Pinarayi Vijayan hospitalised in Chennai
Highlights

72 ವರ್ಷದ ವಿಜಯನ್ ಅವರು ಶುಕ್ರವಾರ ಇತ್ತೀಚೆಗೆ ಹತ್ಯೆಯಾದ ಆದಿವಾಸಿ ಯುವಕ ಮಧು ಚಿಂಡಕಿ ಅವರ ಮನೆಗೆ ಭೇಟಿ ನೀಡಿದ ನಂತರ ಆಯಾಸಕ್ಕೆ ಒಳಗಾಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ

ಚೆನ್ನೈ(ಮಾ.03): ಅನಾರೋಗ್ಯದ ಸಮಸ್ಯೆ ಹಾಗೂ ವಾಡಿಕೆಯ ವೈದ್ಯಕೀಯ ತಪಾಸಣೆ ಕಾರಣಕ್ಕಾಗಿ ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಚೆನ್ನೈ'ನ ಅಪೊಲೊ ಆಸ್ಪತ್ರೆಗೆ ದಾಖಲಾಗಿದ್ದಾರೆ.

ಶುಕ್ರವಾರ ರಾತ್ರಿ ದಾಖಲಾಗಿರುವ ವಿಜಯನ್ ಅವರನ್ನು ಪರಿಣಿತ ವೈದ್ಯರ ತಂಡ ಚಿಕಿತ್ಸೆ ನೀಡುತ್ತಿದೆ. ಭಾನುವಾರ ಸಂಜೆ ಆಸ್ಪತ್ರೆಯಿಂದ ಬಿಡುಗಡೆಯಾಗುವ ಸಾಧ್ಯತೆಯಿದೆ.

72 ವರ್ಷದ ವಿಜಯನ್ ಅವರು ಶುಕ್ರವಾರ ಇತ್ತೀಚೆಗೆ ಹತ್ಯೆಯಾದ ಆದಿವಾಸಿ ಯುವಕ ಮಧು ಚಿಂಡಕಿ ಅವರ ಮನೆಗೆ ಭೇಟಿ ನೀಡಿದ ನಂತರ ಆಯಾಸಕ್ಕೆ ಒಳಗಾಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಕೆಲದಿನಗಳ ಹಿಂದಷ್ಟೆ ಗೋವಾ ಸಿಎಂ ಮನೋಹರ್ ಪರ್ರಿಕರ್ ಆರೋಗ್ಯದ ಏರುಪೇರಿನಿಂದ ಚಿಕಿತ್ಸೆಗೆ ಒಳಪಟ್ಟು ಇತ್ತೀಚಿಗಷ್ಟೆ ಡಿಸ್ಚಾರ್ಜ್ ಆಗಿದ್ದರು.              

loader