ಚುನಾವಣೆ ವೇಳೆಯಲ್ಲಿ ಕೇಜ್ರಿವಾಲ್ ಅವರು ಬ್ಲ್ಯೂ ವ್ಯಾಗನಾರ್ ಕಾರನ್ನು ಬಳಸುತ್ತಿದ್ದರು. ದೆಹಲಿ ಪೊಲೀಸರ ವಿರುದ್ಧದ ಪ್ರತಿಭಟನೆಯಲ್ಲಿ ಇದೇ ಕಾರನ್ನು ಬಳಸಿದ್ದ ಕೇಜ್ರಿವಾಲ್ ಅಲ್ಲಿಯೇ ಮಲಗಿದ್ದರು

ನವದೆಹಲಿ(ಅ.14): ದೆಹಲಿಯ ವಿಧಾನಸಭೆಯ ಹೊರಗಿನಿಂದ ಕಳೆದ 2 ದಿನಗಳ ಹಿಂದೆ ಕಳವಾಗಿದ್ದ ಸಿಎಂ ಅರವಿಂದ ಕೇಜ್ರಿವಾಲ್‌ರ ನೀಲಿ ಬಣ್ಣದ ವ್ಯಾಗನಾರ್ ಕಾರು ಗಾಜಿಯಾಬಾದ್‌ನಲ್ಲಿ ಪತ್ತೆಯಾಗಿದೆ. ಕಾರು ಪತ್ತೆಯಾಗಿರುವ ಬಗ್ಗೆ ಗಾಜಿಯಾಬಾದ್ ಪೊಲೀಸರ ಜೊತೆ ದೆಹಲಿ ಪೊಲೀಸರು ಸಂಪರ್ಕದಲ್ಲಿದ್ದಾರೆ. ವಾಹನದ ಎಂಜಿನ್ ಮತ್ತು ಚೇಸಿಸ್ ಸಂಖ್ಯೆಗಳ ಬಗ್ಗೆ ಪೊಲೀಸರು ಪರಿಶೀಲನೆ ನಡೆಸುತ್ತಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಚುನಾವಣೆ ವೇಳೆಯಲ್ಲಿ ಕೇಜ್ರಿವಾಲ್ ಅವರು ಬ್ಲ್ಯೂ ವ್ಯಾಗನಾರ್ ಕಾರನ್ನು ಬಳಸುತ್ತಿದ್ದರು. ದೆಹಲಿ ಪೊಲೀಸರ ವಿರುದ್ಧದ ಪ್ರತಿಭಟನೆಯಲ್ಲಿ ಇದೇ ಕಾರನ್ನು ಬಳಸಿದ್ದ ಕೇಜ್ರಿವಾಲ್ ಅಲ್ಲಿಯೇ ಮಲಗಿದ್ದರು. ಇದು ಒಂದು ರೀತಿಯಲ್ಲಿ ಅವರಿಗೆ ಅದೃಷ್ಟದ ಕಾರಾಗಿತ್ತು.