Asianet Suvarna News Asianet Suvarna News

ಮಧುಮೇಹ ತೀವ್ರ: ಕೇಜ್ರಿವಾಲ್'ಗೆ ಮತ್ತೆ ಬೆಂಗ​ಳೂ​ರಲ್ಲಿ ಚಿಕಿ​ತ್ಸೆ

ನಾಳೆ ಆಗಮನ | 10-12 ದಿನ ಶುಶ್ರೂಷೆ ಸಾಧ್ಯತೆ

Kejriwal to undergo treatment for Diabetes in Bengaluru

ನವದೆಹಲಿ: ಕಳೆದ 2 ತಿಂಗ​ಳಿಂದ ಪಂಜಾಬ್‌ ಹಾಗೂ ಗೋವಾ ವಿಧಾ​ನ​ಸ​ಭೆ ಚುನಾ​ವ​ಣೆ​ಗಾಗಿ ವಿಶ್ರ​ಮಿ​ಸದೇ ಪ್ರಚಾರದಲ್ಲಿ ನಿರ​ತ​ರಾ​ಗಿದ್ದ ದೆಹಲಿ ಮುಖ್ಯ​ಮಂತ್ರಿ ಅರ​ವಿಂದ ಕೇಜ್ರಿ​ವಾಲ್‌ ಅವರು ಇದೀಗ ಅನಾ​ರೋ​ಗ್ಯ​ಕ್ಕೀ​ಡಾ​ಗಿ​ದ್ದಾರೆ.
ದಿಲ್ಲಿಯಿಂದ ವಿವಿಧ ರಾಜ್ಯಗಳಿಗೆ ಚುನಾವಣೆ ಪ್ರಚಾ​ರಕ್ಕೆ ತೆರಳಿದ ಪರಿಣಾಮ ಅವರ ಆಹಾರದಲ್ಲಿ ವ್ಯತ್ಯಯವಾ​ಗಿದ್ದು, ಅವರ ರಕ್ತ​ದ​ಲ್ಲಿನ ಸಕ್ಕರೆ ಪ್ರಮಾಣ ಏಕಾ​ಏಕಿ ಏರಿ​ಕೆ​ಯಾ​ಗಿದೆ. ಹೀಗಾಗಿ ಅವರೀಗ ದಿನಕ್ಕೆ ಮೂರು ಬಾರಿ ಇನ್ಸು​ಲಿನ್‌ ತೆಗೆದುಕೊಳ್ಳಬೇಕಾದ ಸ್ಥಿತಿ ಎದುರಾಗಿದೆ. ಆಮ್‌ಆದ್ಮಿ ಪಕ್ಷ ಬಹುವಾಗಿ ನಂಬಿರುವ ಪಂಜಾಬ್‌ ಮತ್ತು ಗೋವಾದಲ್ಲಿ ಮತದಾನ ಮುಗಿದಿರುವ ಹಿನ್ನೆಲೆಯಲ್ಲಿ ಅವರು ತುರ್ತು ಚಿಕಿತ್ಸೆಗೆ ನಿರ್ಧರಿಸಿದ್ದಾರೆ. ಈ ಹಿನ್ನೆ​ಲೆ​ಯಲ್ಲಿ ಅವರು ಚಿಕಿ​ತ್ಸೆ​ಗಾಗಿ ಮಂಗ​ಳ​ವಾ​ರವೇ ಬೆಂಗ​ಳೂ​ರಿಗೆ ತೆರ​ಳ​ಲಿ​ದ್ದಾರೆ. ಫೆ.7ರಿಂದ ಸುಮಾರು 10-12 ದಿನ​ಗಳ ಕಾಲ ಬೆಂಗ​ಳೂ​ರಿ​ನಲ್ಲಿ ಪ್ರಕೃತಿ ಚಿಕಿ​ತ್ಸೆ​ಗೆ (​ನ್ಯಾಚು​ರೋ​ಪ​ತಿ) ಅವರು ಒಳ​ಗಾ​ಗ​ಲಿ​ದ್ದಾರೆ ಎಂದು ಆಮ್‌ ಆದ್ಮಿ ಪಕ್ಷದ ಮೂಲ​ಗಳು ತಿಳಿ​ಸಿ​ವೆ.
ಕೇಜ್ರಿವಾಲ್‌ ಚಿಕಿತ್ಸೆಗಾಗಿ ಬೆಂಗಳೂರಿಗೆ ಭೇಟಿ ನೀಡುತ್ತಿರುವುದು ಇದು 4ನೇ ಬಾರಿ. ಈ ಹಿಂದೆ 2015ರ ಮಾ.5ರಂದು ಜಿಂದಾಲ್‌ ನ್ಯಾಚು​ರೋ​ಪ​ತಿ ಇನ್ಸಿ$್ಟಟ್ಯೂಟ್‌ಗೆ ದಾಖಲಾಗಿ ಕೆಮ್ಮಿಗೆ ಚಿಕಿತ್ಸೆ ಪಡೆದಿದ್ದರು. ಬಳಿಕ 2016ರ ಜ.30ರಂದು ಕೆಮ್ಮು ಮತ್ತು ಸಕ್ಕರೆ ಕಾಯಿಲೆಯ ಚಿಕಿತ್ಸೆಗಾಗಿ ಜಿಂದಾಲ್‌ ನ್ಯಾಚು​ರೋ​ಪ​ತಿ ಇನ್ಸ್ಟಿಟ್ಯೂಟ್‌ಗೆ ಮತ್ತೊಮ್ಮೆ ದಾಖಲಾಗಿ ಚಿಕಿತ್ಸೆ ಪಡೆದಿದ್ದರು. 2016ರ ಸೆ.15ರಂದು ಬೆಂಗಳೂರಿನ ಮಜುಂದಾರ್‌ ಶಾ ಕ್ಯಾನ್ಸರ್‌ ಸೆಂಟರ್‌ನಲ್ಲಿ ಕೆಮ್ಮಿಗೆ ಚಿಕಿತ್ಸೆ ಪಡೆದುಕೊಂಡಿದ್ದರು. ಈ ವೇಳೆ ಕಿರುನಾಲಿಗೆ ಚಿಕಿತ್ಸೆ ನೆರವೇರಿಸಲಾಗಿತ್ತು.

Follow Us:
Download App:
  • android
  • ios