ಜನರೇಶನ್ II (2006-13ರ ನಡುವೆ ತಯಾರಿಸಲ್ಪಟ್ಟ) ಹಾಗೂ ಜನರೇಶನ್ III (2013ರ ಬಳಿಕ ತಯಾರಿಸಲ್ಪಟ್ಟ) ಮತಯಂತ್ರಗಳು ದೆಹಲಿಯಲ್ಲಿ ಲಭ್ಯವಿದ್ದರೂ ಚುನಾವಣಾ ಆಯೊಗವು ಸುರಕ್ಷಿತವಲ್ಲದ ಜನರೇಶನ್ I (2006ರ ಮುಂಚೆ ತಯಾರಿಸಲ್ಪಟ್ಟ) ಮತಯಂತ್ರಗಳನ್ನು ಮುಂದಿನ ಎಂಸಿಡಿ ಚುನಾವಣೆಗಳಿಗೆ ಬಳಸಲು ಆದೇಶಿಸಿದೆ, ಎಂದು ಕೇಜ್ರಿವಾಲ್ ಹೇಳಿದ್ದಾರೆ.

ನವದೆಹಲಿ (ಏ.10): ವಿದ್ಯುನ್ಮಾನ ಮತಯಂತ್ರ (ಇವಿಎಂ)ಗಳಲ್ಲಿ ಹಸ್ತಕ್ಷೇಪಕ್ಕೆ ಕುರಿತಂತೆ ಚುನಾವಣಾ ಆಯೋಗದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿರುವ ಅರವಿಂದ್ ಕೇಜ್ರಿವಾಲ್, ಆಯೋಗವು ಬಿಜೆಪಿಯ ಗೆಲುವಿಗಾಗಿ ಶ್ರಮಿಸುತ್ತಿರುವಂತೆ ಕಾಣುತ್ತಿದೆಯೆಂದು ಆರೋಪಿಸಿದ್ದಾರೆ.

ಮುಂಬರುವ ದೆಹಲಿ ಮುನ್ಸಿಪಲ್ ಕಾರ್ಪೋರೇಶನ್ (ಎಂಸಿಡಿ) ಚುನಾವಣೆಗಳಲ್ಲಿ 2006ರ ಮುಂಚೆ ತಯಾರಿಸಲ್ಪಟ್ಟ ಮತಯಂತ್ರಗಳನ್ನು ಬಳಸಲು ಆಯೋಗ ನಿರ್ಧರಿಸಿರುವುದನ್ನು ಪ್ರಶ್ನಿಸಿದ ಕೇಜ್ರಿವಾಲ್, ಆ ಯಂತ್ರಗಳಲ್ಲಿ ಸಾಕಷ್ಟು ಸುರಕ್ಷತಾ ಕ್ರಮಗಳು ಇಲ್ಲವೆಂದು ಹೇಳಿದ್ದಾರೆ.

Scroll to load tweet…

ಜನರೇಶನ್ II (2006-13ರ ನಡುವೆ ತಯಾರಿಸಲ್ಪಟ್ಟ) ಹಾಗೂ ಜನರೇಶನ್ III (2013ರ ಬಳಿಕ ತಯಾರಿಸಲ್ಪಟ್ಟ) ಮತಯಂತ್ರಗಳು ದೆಹಲಿಯಲ್ಲಿ ಲಭ್ಯವಿದ್ದರೂ ಚುನಾವಣಾ ಆಯೊಗವು ಸುರಕ್ಷಿತವಲ್ಲದ ಜನರೇಶನ್ I (2006ರ ಮುಂಚೆ ತಯಾರಿಸಲ್ಪಟ್ಟ) ಮತಯಂತ್ರಗಳನ್ನು ಮುಂದಿನ ಎಂಸಿಡಿ ಚುನಾವಣೆಗಳಿಗೆ ಬಳಸಲು ಆದೇಶಿಸಿದೆ, ಎಂದು ಕೇಜ್ರಿವಾಲ್ ಹೇಳಿದ್ದಾರೆ.

ಮತಯಂತ್ರಗಳ ಸಮಸ್ಯೆಯನ್ನು ‘ದೋಷ’ವೆಂಬುವುದನ್ನು ಅಲ್ಲಗಳೆದ ಕೇಜ್ರಿವಾಲ್, ವಾಸ್ತವದಲ್ಲಿ ಬಿಜೆಪಿಯನ್ನು ಗೆಲ್ಲಿಸಲು ಮಾಡಲಾಗಿರುವ ಹಸ್ತಕ್ಷೇಪವೆಂದು ಹೇಳಿದ್ದಾರೆ. ‘ಕೋಡಿಂಗ್’ನ್ನು ಬದಲಾಯಿಸಲಾಗಿದೆ, ಪ್ರೋಗ್ರಾಮನ್ನು ಬದಲಾಯಿಸಲಾಗಿದೆ...’ ಎಂದು ಅವರು ಹೇಳಿದ್ದಾರೆ.

ಯಾವುದೇ ಪಕ್ಷಕ್ಕೆ ಬಟನ್ ಒತ್ತಿದರೂ ಬಿಜೆಪಿಗೆ ಮತಬೀಳುವ 18 ಮತಯಂತ್ರಗಳು ಭಾನುವಾರ ರಾಜಸ್ಥಾನದ ಧೋಲಾಪುರ ವಿಧಾನಸಭೆಗೆ ನಡೆದ ಉಪಚುನಾವಣೆ ವೇಳೆ ಪತ್ತೆಯಾಗಿವೆ, ಎಂದು ಕೇಜ್ರಿವಾಲ್ ಹೇಳಿದ್ದಾರೆ.

ಮಧ್ಯಪ್ರದೇಶದ ಭೀಂಡ್’ನಲ್ಲೂ ಇಂತಹ ಘಟನೆ ನಡೆದಿದೆ. ಎಲ್ಲಾ ಸಾಕ್ಷ್ಯಾಧಾರಗಳು ಲಭ್ಯವಿದ್ದಾಗ್ಯೂ ಚುನಾವಣಾ ಆಯೋಗವು ತನಿಖೆ ನಡೆಸಲು ಸಿದ್ಧವಿಲ್ಲ. ಆದುದರಿಂದ ಚುನಾವಣಾ ಆಯೋಗವೇ ಇದರ ಹಿಂದಿದೆ ಎಂಬ ಸಂಶಯಗಳು ಹುಟ್ಟಿಕೊಳ್ಳುತ್ತಿವೆ, ಎಂದು ಕೇಜ್ರಿವಾಲ್ ಹೇಳಿದ್ದಾರೆ.