ಪ್ರಸ್ತುತ 250 ಮಿಲಿಯನ್ ಉಳಿತಾಯ ಖಾತೆ ಗ್ರಾಹಕರನ್ನು ಹೊಂದಿರುವುದಾಗಿ ಎಸ್'ಬಿಐ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.

ನವದೆಹಲಿ(ಮಾ.04): ಸಾರ್ವಜನಿಕ ವಲಯದ ಅತಿದೊಡ್ಡ ಬ್ಯಾಕ್ ಆದ ಸ್ಟೇಟ್‌ ಬ್ಯಾಂಕ್‌ ಆಫ್‌ ಇಂಡಿಯಾ ಬ್ಯಾಂಕ್‌ ಖಾತೆಗಳಲ್ಲಿ ಕನಿಷ್ಠ ಮೊತ್ತ ಇಡದ ತನ್ನ ಗ್ರಾಹಕರಿಗೆ ಶುಲ್ಕ ವಿಧಿಸಲು ತೀರ್ಮಾನಿಸಿದೆ. 
ಮೆಟ್ರೋ ನಗರಗಳಲ್ಲಿ ಕನಿಷ್ಠ ರೂ. 5000, ದೊಡ್ಡ ನಗರಗಳಲ್ಲಿ ರೂ.3000, ಸೆಮಿ ಅರ್ಬನ್‌ ನಗರಗಳಲ್ಲಿ ರೂ.2000 ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ಕನಿಷ್ಠ ರೂ.1000 ಹಣ ಇಡುವುದನ್ನು ಕಡ್ಡಾಯ ಮಾಡಲಾಗಿದ್ದು ಏಪ್ರಿಲ್ 1ರಿಂದಲೇ ಈ ನಿಯಮ ಜಾರಿಗೆ ಬರಲಿದೆ.

ಕನಿಷ್ಠ ಇರಬೇಕಾದ ಹಣ ಮತ್ತು ಕೊರತೆ ಹಣದ ನಡುವಿನ ವ್ಯತ್ಯಾಸ ಆಧರಿಸಿ ರೂ.100 ದಂಡ ವಿಧಿಸಲಾಗುವುದು. ದಂಡಕ್ಕೆ ಸೇವಾ ತೆರಿಗೆ ಕೂಡಾ ವಿಧಿಸಲಾಗುವುದು ಎಂದು ಎಸ್'ಬಿಐ ಹೇಳಿದೆ.
ಇದೇ ವೇಳೆ ಬ್ಯಾಂಕ್‌ನ ಶಾಖೆಗಳಲ್ಲಿ ಮಾಸಿಕ 3ಕ್ಕಿಂತ ಹೆಚ್ಚು ನಗದು ವ್ಯವಹಾರ ನಡೆಸುವವರಿಗೆ 50 ರೂಪಾಯಿ ಶುಲ್ಕ ವಿಧಿಸಲಾಗುವುದು ಎಂದು ದೇಶದ ಅಗ್ರಗಣ್ಯ ಬ್ಯಾಂಕ್‌ ಆಗಿರುವ ಎಸ್‌ಬಿಐ ತಿಳಿಸಿದೆ.

ಪ್ರಸ್ತುತ 250 ಮಿಲಿಯನ್ ಉಳಿತಾಯ ಖಾತೆ ಗ್ರಾಹಕರನ್ನು ಹೊಂದಿರುವುದಾಗಿ ಎಸ್'ಬಿಐ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.