ಅಂಬರೀಶ್ ವಿರುದ್ಧ ಕಾಂಗ್ರೆಸ್ ಮುಖಂಡ ಕೆಬ್ಬಳ್ಳಿ ಆನಂದ್ ವಾಗ್ದಾಳಿ

First Published 9, Apr 2018, 9:21 AM IST
Kebballi Anandh Slams Ambarish
Highlights

ಮಂಡ್ಯದಲ್ಲಿ ಅಂಬರೀಷ್ ವಿರುದ್ದ ಕಾಂಗ್ರೆಸ್ ಮುಖಂಡ ಕೆಬ್ಬಳ್ಳಿ ಆನಂದ್ ವಾಗ್ದಾಳಿ ನಡೆಸಿದ್ದಾರೆ. ಕಾಂಗ್ರೆಸ್ ಹೈಕಮಾಂಡ್ ನಿಂದ ಶಾಸಕರಾಗಿದ್ದ ಅಂಬರೀಶ್ ಗೆ ಎಚ್ಚರಿಕೆ ಬಂದಿದೆ‌. ಅಂಬರೀಶ್ ಕೆಪಿಸಿಸಿ ಹಾಗೂ ಹೈಕಮಾಂಡ್ ಅನ್ನು ಬ್ಲಾಕ್ ಮೇಲ್ ಮಾಡುತ್ತಿದ್ದಾರೆ ಎಂದು ಹೇಳಿದ್ದಾರೆ.

ಮಂಡ್ಯ : ಮಂಡ್ಯದಲ್ಲಿ ಅಂಬರೀಷ್ ವಿರುದ್ದ ಕಾಂಗ್ರೆಸ್ ಮುಖಂಡ ಕೆಬ್ಬಳ್ಳಿ ಆನಂದ್ ವಾಗ್ದಾಳಿ ನಡೆಸಿದ್ದಾರೆ. ಕಾಂಗ್ರೆಸ್ ಹೈಕಮಾಂಡ್ ನಿಂದ ಶಾಸಕರಾಗಿದ್ದ ಅಂಬರೀಶ್ ಗೆ ಎಚ್ಚರಿಕೆ ಬಂದಿದೆ‌. ಅಂಬರೀಶ್ ಕೆಪಿಸಿಸಿ ಹಾಗೂ ಹೈಕಮಾಂಡ್ ಅನ್ನು ಬ್ಲಾಕ್ ಮೇಲ್ ಮಾಡುತ್ತಿದ್ದಾರೆ ಎಂದು ಹೇಳಿದ್ದಾರೆ.

 ಚಾಮುಂಡೇಶ್ವರಿ ಯಲ್ಲಿ ಒಕ್ಕಲಿಗರ ಮತ ಸೆಳೆಯಲು ಪ್ರಚಾರಕ್ಕೆ ಬರ್ತೇನೆ ಎಂದು ಸಿಎಂ ಸಿದ್ದರಾಮಯ್ಯರನ್ನು ಬ್ಲಾಕ್ ಮೇಲ್ ಮಾಡುತ್ತಿದ್ದಾರೆ. ಕೆಪಿಸಿಸಿ ನನ್ನ ಕಡೆಗಣಿಸಿದೆ ಎಂದು ಅಂಬರೀಶ್ ಹೇಳುತ್ತಾರೆ.  ಆದರೆ ಮಂಡ್ಯದಲ್ಲಿ ಅಂಬರೀಶ್ ಗೆಲುವಿಗೆ ಕಳೆದ ಬಾರಿ ದುಡಿದವರನ್ನು ಮೂಲೆಗುಂಪು ಮಾಡಿದ್ದಾರೆ.

ಅಂಬರೀಶ್ ಗೆ ಅನಾರೋಗ್ಯ ಇದ್ದರೂ ಏಕೆ ಚುನಾವಣೆಯಲ್ಲಿ ಸ್ಪರ್ಧಿಸಬೇಕು. ನಿಮ್ಮ ಬೆಂಬಲಿಗನಿಗೆ ಟಿಕೆಟ್ ಕೊಡಿಸಿ ತಾಕತ್ತಿದ್ದರೆ ಮಂಡ್ಯದಿಂದ ಗೆಲ್ಲಿಸಿಕೊಂಡು ಬನ್ನಿ. ಅಂಬರೀಶ್ ಟಿಕೆಟ್ ತಂದು ಜೆಡಿಎಸ್ ಜೊತೆಗೆ ಒಳ ಒಪ್ಪಂದ ಮಾಡಿಕೊಂಡು ಚುನಾವಣೆ ಗೆಲ್ಲುತ್ತಾ ಬರುತ್ತಿದ್ದಾರೆ. ಈ ಬಾರಿ ಕಾಂಗ್ರೆಸ್ ಅಂಬರೀಶ್ ಗೆ ಟಿಕೆಟ್ ಕೊಟ್ಟರೆ ನಾವು ಬಂಡಾಯ ಅಭ್ಯರ್ಥಿ ಕಣಕ್ಕಿಳಿಸುತ್ತೇವೆ ಎಂದು ಆನಂದ್ ಹೇಳಿದ್ದಾರೆ.

ಅಂಬರೀಶ್ ಶಾಸಕರಾಗಿ ಅಧಿಕಾರ ಸೌಲಭ್ಯವನ್ನ ಬೆಂಬಲಿಗನಿಗೆ ಹಸ್ತಾಂತರ ಮಾಡುತ್ತಾರೆ. ಕ್ಷೇತ್ರಕ್ಕೆ ಬಾರದ ಅಂಬರೀಶ್’ ಗೆ ಏಕೆ ಟಿಕೆಟ್ ಕೊಡಬೇಕು ಅದರ ಬದಲು‌ ನಿಷ್ಟಾವಂತರಿಗೆ ಕೊಡಿ. ಸ್ವಪಕ್ಷೀಯ ಮಾಜಿ ಶಾಸಕನ ವಿರುದ್ಧ ಇದೀಗ ಕೆಬ್ಬಳ್ಳಿ ಆನಂದ್ ವಾಗ್ದಾಳಿ ನಡೆಸಿದ್ದಾರೆ.

loader