ರಾಜ್ಯದ ಪ್ರತೀ ರೈತರಿಗೂ 5 ಲಕ್ಷ ಜೀವವಿಮೆ

news | Saturday, May 26th, 2018
Suvarna Web Desk
Highlights

ರಾಜ್ಯದ ಪ್ರತಿಯೊಬ್ಬ ರೈತರಿಗೂ ತಲಾ 5 ಲಕ್ಷ ಜೀವ ವಿಮೆ ಸೌಲಭ್ಯ ನೀಡುವುದಾಗಿ  ತೆಲಂಗಾಣ ಸರ್ಕಾರ ಘೊಷಣೆ ಮಾಡಿದೆ. 

ಹೈದ್ರಾಬಾದ್ (ಮೇ 26) :  ರಾಜ್ಯದ ಪ್ರತಿಯೊಬ್ಬ ರೈತರಿಗೂ ತಲಾ 5 ಲಕ್ಷ ಜೀವ ವಿಮೆ ಸೌಲಭ್ಯ ನೀಡುವುದಾಗಿ  ತೆಲಂಗಾಣ ಸರ್ಕಾರ ಘೋಷಣೆ ಮಾಡಿದೆ. 

ಇದೇ ವರ್ಷದ ಆಗಸ್ಟ್ 15ರಿಂದ ಈ ಹೊಸ ಯೋಜನೆಯು ಜಾರಿಗೆ ನಿರ್ಧರಿಸಲಾಗಿದ್ದು, ವಿಮಾ ಕಂಪನಿಗಳು ಹಾಗೂ ತಮ್ಮ ಸಂಪುಟದ ಸಚಿವರೊಂದಿಗೆ ಈ ಬಗ್ಗೆ ಚರ್ಚೆ ನಡೆಸಿ ಈ ಯೋಜನೆಯನ್ನು ಘೋಷಣೆ ಮಾಡಲಾಗಿದೆ ಎಂದು ತೆಲಂಗಾಣ ಮುಖ್ಯಮಂತ್ರಿ ಕೆ. ಚಂದ್ರ ಶೇಖರ್ ರಾವ್ ಹೇಳಿದ್ದಾರೆ. 

ಈ ವಿಮೆಯ ಸಂಪೂರ್ಣ ಹಣವನ್ನೂ ಕೂಡ ತೆಲಂಗಾಣ ಸರ್ಕಾರವೇ ಭರಿಸುತ್ತದೆ.  18ರಿಂದ 59 ವರ್ಷ ವಯಸ್ಸಿನ ಪ್ರತೀಯೊಬ್ಬ ರೈತರಿಗೂ ಈ ಯೋಜನೆ ಅನ್ವಯವಾಗಲಿದೆ ಎಂದು ಮುಖ್ಯಮಂತ್ರಿ ಚಂದ್ರ ಶೇಖರ್ ರಾವ್ ಹೇಳಿದ್ದಾರೆ. 

ಪ್ರತೀ ವರ್ಷ ಆಗಸ್ಟ್ ತಿಂಗಳಲ್ಲಿ ವಿಮೆಯ ಪ್ರೀಮಿಯಂ ಪಾವತಿ ಮಾಡಲಾಗುತ್ತದೆ. ಇನ್ನು ಯಾವುದೇ ರೈತರು ಮೃತಪಟ್ಟಾಗ ಅದರ ಹಣವು ನಾಮಿನಿಗೆ 10 ದಿನಗಳಲ್ಲೇ ಸೇರುತ್ತದೆ ಎಂದು ತಿಳಿಸಿದ್ದಾರೆ. 

Comments 0
Add Comment

    Related Posts

    Health Benifit Of Hibiscus

    video | Thursday, April 12th, 2018
    Sujatha NR