ಮಲಯಾಳಂ ನಟಿ ಲೈಂಗಿಕ ಕಿರುಕುಳ ಪ್ರಕರಣದಲ್ಲಿ ಬಂಧಿತ ನಟ ದಿಲೀಪ್ ಪತ್ನಿ ಕಾವ್ಯಾ ಮಾಧವನ್ ಕೂಡ ಭಾಗಿಯಾಗಿದ್ದಾರೆ ಎಂದು ಶಂಕಿಸಬಹುದಾದ ಸಂಗತಿ ಬೆಳಕಿಗೆ ಬಂದಿದೆ.

ನವದೆಹಲಿ(ಆ.31): ಮಲಯಾಳಂ ನಟಿ ಲೈಂಗಿಕ ಕಿರುಕುಳ ಪ್ರಕರಣದಲ್ಲಿ ಬಂಧಿತ ನಟ ದಿಲೀಪ್ ಪತ್ನಿ ಕಾವ್ಯಾ ಮಾಧವನ್ ಕೂಡ ಭಾಗಿಯಾಗಿದ್ದಾರೆ ಎಂದು ಶಂಕಿಸಬಹುದಾದ ಸಂಗತಿ ಬೆಳಕಿಗೆ ಬಂದಿದೆ.

ಕಾವ್ಯಾ ಮಾಧವನ್ ತನಗೆ ಈ ಕೃತ್ಯ ಎಸಗಲು ಸೂಚನೆ ನೀಡಿದ್ದಳು ಎಂಬ ಸಂಗತಿಯನ್ನು, ಪ್ರಕರಣದ ಪ್ರಮುಖ ಆರೋಪಿ ಪಲ್ಸರ್ ಸುನಿ ಬಹಿರಂಗ ಪಡಿಸಿದ್ದಾನೆ. ಎರ್ನಾಕುಲಂ ಕೋರ್ಟ್‌'ಗೆ ಕರೆದೊಯ್ಯುತ್ತಿದ್ದ ವೇಳೆ ಮಾಧ್ಯಮಕ್ಕೆ ಈ ಹೇಳಿಕೆ ನೀಡಿರುವ ಆತ, ತಾನು ಈ ಹಿಂದೆ ‘ಮೇಡಂ’ ಎಂದು ಉಲ್ಲೇಖಿಸುತ್ತಿದ್ದ ಮಹಿಳೆ ಬೇರೆಯಾರೂ ಅಲ್ಲ ಅದು ಕಾವ್ಯಾ ಮಾಧವನ್ ಎಂದು ಹೇಳಿದ್ದಾನೆ.

ಪಲ್ಸರ್ ಸುನಿ ತಾನು ಈ ಹಿಂದೆ, ನಟಿಯ ಅಶ್ಲೀಲ ಚಿತ್ರಗಳ ಫೋಟೋಗಳಿರುವ ಪೆನ್‌ಡ್ರೈವ್ ಅನ್ನು ನೀಡಲು ಕಾವ್ಯಾಳ ಕಚೇರಿಗೆ ಹೋಗಿದ್ದಾಗಿ ಹೇಳಿಕೆ ನೀಡಿದ್ದ. ಆದರೆ, ಆಕೆಯನ್ನು ಮೇಡಂ ಎಂದು ಉಲ್ಲೇಖಿಸಿದ್ದ. ಮಂಜುವಾರಿಯರ್ ದಿಲೀಪ್ ಮೊದಲ ಪತ್ನಿಯಾಗಿದ್ದು, ಮದುವೆಯ ನಂತರ ದಿಲೀಪ್ ಕಾವ್ಯಾ ಜೊತೆ ಸಂಬಂಧ ಇಟ್ಟುಕೊಂಡಿದ್ದನ್ನು ಮಂಜು ವಾರಿಯರ್‌'ಗೆ ಸಂತ್ರಸ್ತ ನಟಿ ಹೇಳಿದ್ದಳು. ಹೀಗಾಗಿ ನಟಿ ಮೇಲೆ ದಿಲೀಪ್ ಮತ್ತು ಕಾವ್ಯಾ ಮಾಧನವನ್ ದ್ವೇಷ ಹೊಂದಿದ್ದರು ಎನ್ನಲಾಗಿದೆ.