ಬಾಹುಬಲಿಯನ್ನು ಬಹಳ ಸಲ ನೋಡಿದ್ದೇನೆ. ಅಲ್ಲಿ ಬಾಹುಬಲಿಗಿಂತ ನನಗೆ ಇಷ್ಟವಾಗಿದ್ದು ಕಟ್ಟಪ್ಪ. ರಾಜನೆದುರು ಅವನ ನಿಯತ್ತೇ ನನ್ನನ್ನು ತುಂಬಾ ಕಾಡಿತು. ನಾನು ಕೂಡ ಆಸ್ಟ್ರೇಲಿಯಾ ತಂಡಕ್ಕೆ ಕಟ್ಟಪ್ಪನಂತೆ ನಿಯತ್ತಿನಲ್ಲೇ ಇದ್ದೇನೆ. ಕ್ರಿಕೆಟ್ ಮೈದಾನದಲ್ಲಿಯೇ ಅವನಂತೆಯೇ ಹೋರಾಡುತ್ತೇನೆ. ಸಿನಿಮಾದ ಕ್ಲೈಮ್ಯಾಕ್ಸಿನಲ್ಲಿ ಆತ ಯಾಕೆ ಅಮರೇಂದ್ರ ಬಾಹುಬಲಿಯನ್ನು ಕೊಲ್ಲುತ್ತಾನೆ ಎನ್ನುವುದು ನನಗೂ ಕುತೂಹಲ ಮೂಡಿಸಿದೆ. ಕಟ್ಟಪ್ಪನಂತೆ ಗಡ್ಡ ಬಿಟ್ಟು ವಿಶೇಷ ಆನಂದವನ್ನು ಅನುಭವಿಸುತ್ತಿದ್ದೇನೆ’ ಎಂದಿದ್ದಾರೆ.
ಸಿಡ್ನಿ(ಅ.25): ಬಾಹುಬಲಿಯ ಕಟ್ಟಪ್ಪ ಕೇವಲ ಭಾರತೀಯರನ್ನಷ್ಟೇ ಕಾಡಲಿಲ್ಲ. ಆಸ್ಟ್ರೇಲಿಯನ್ನರ ತಲೆಯಲ್ಲೂ ಕೌತುಕದ ಕಚಗುಳಿ ಇಟ್ಟಿದ್ದಾನೆ! ಬಾಹುಬಲಿಯನ್ನು ಹತ್ತಾರು ಸಲ ನೋಡಿದ ಆಸೀಸ್ ಕ್ರಿಕೆಟಿಗನೊಬ್ಬ ಕಟ್ಟಪ್ಪನೇ ಆಗಿ ಹೋಗಿದ್ದಾನೆ!
ಆಸ್ಟ್ರೇಲಿಯಾ ಕ್ರಿಕೆಟ್ ತಂಡದ ಮಧ್ಯಮವೇಗಿ ಡಗ್ ಬೊಲಿಂಜರ್ ಅವರನ್ನು ನೀವು ಈ ಹಿಂದೆ ನೋಡಿಯೇ ಇರುತ್ತೀರಿ. ಅವರ ಮುಖದಲ್ಲಿ ಒಂದು ಕೂದಲೂ ಕಾಣಿಸೋದಿಲ್ಲ. ಮೈದಾನಕ್ಕೆ ಇಳಿಯುವ ಮುನ್ನ ಕ್ಲೀನ್ ಶೇವ್ಡ್ ಆಗಿಯೇ ಬರುತ್ತಿದ್ದರು. ಅಂಥ ಶಿಸ್ತಿನ ಆಟಗಾರನೀಗ ಕಟ್ಟಪ್ಪನ ಅವತಾರಕ್ಕೆ ತಿರುಗಿದ್ದಾರೆ. ಥೇಟ್ ಕಟ್ಟಪ್ಪನಂತೆಯೇ ಗಡ್ಡ ಬಿಟ್ಟು, ‘ಬಾಹುಬಲಿ’ಯೆಂಬ ಪದವನ್ನು ಆಸ್ಟ್ರೇಲಿಯನ್ನರ ಕಿವಿಗೆ ತಲುಪಿಸಿದ್ದಾರೆ. ಭಾಷೆ ತಿಳಿಯದಿದ್ದರೂ ಈ ಚಿತ್ರವನ್ನು ಸಾಕಷ್ಟು ಸಲ ನೋಡಿರುವುದು ಕೇವಲ ಗಡ್ಡಪ್ಪನ ಕಾರಣಕ್ಕಂತೆ!
ಬಾಹುಬಲಿಯನ್ನು ಬಹಳ ಸಲ ನೋಡಿದ್ದೇನೆ. ಅಲ್ಲಿ ಬಾಹುಬಲಿಗಿಂತ ನನಗೆ ಇಷ್ಟವಾಗಿದ್ದು ಕಟ್ಟಪ್ಪ. ರಾಜನೆದುರು ಅವನ ನಿಯತ್ತೇ ನನ್ನನ್ನು ತುಂಬಾ ಕಾಡಿತು. ನಾನು ಕೂಡ ಆಸ್ಟ್ರೇಲಿಯಾ ತಂಡಕ್ಕೆ ಕಟ್ಟಪ್ಪನಂತೆ ನಿಯತ್ತಿನಲ್ಲೇ ಇದ್ದೇನೆ. ಕ್ರಿಕೆಟ್ ಮೈದಾನದಲ್ಲಿಯೇ ಅವನಂತೆಯೇ ಹೋರಾಡುತ್ತೇನೆ. ಸಿನಿಮಾದ ಕ್ಲೈಮ್ಯಾಕ್ಸಿನಲ್ಲಿ ಆತ ಯಾಕೆ ಅಮರೇಂದ್ರ ಬಾಹುಬಲಿಯನ್ನು ಕೊಲ್ಲುತ್ತಾನೆ ಎನ್ನುವುದು ನನಗೂ ಕುತೂಹಲ ಮೂಡಿಸಿದೆ. ಕಟ್ಟಪ್ಪನಂತೆ ಗಡ್ಡ ಬಿಟ್ಟು ವಿಶೇಷ ಆನಂದವನ್ನು ಅನುಭವಿಸುತ್ತಿದ್ದೇನೆ’ ಎಂದಿದ್ದಾರೆ.
ಅಂದಹಾಗೆ, ಆಸೀಸ್ ತಂಡದ ಈ ಕಟ್ಟಪ್ಪ ಈಗ ನಡೆಯುತ್ತಿರುವ ಮೆಟಾಡೋರ್ ಕಪ್‌ನಲ್ಲಿ ಹೀಗೆಯೆ ಗಡ್ಡಬಿಟ್ಟು, ಎಲ್ಲರನ್ನು ಸೆಳೆಯುತ್ತಿದ್ದಾರೆ.