ಸಲ್ಮಾನ್ ಖಾನ್ ಮನೆಯಲ್ಲಿ ನಡೆದ ಅದ್ದೂರಿ ಗಣೇಶೋತ್ಸದಲ್ಲಿ ಭಾಗಿಯಾಗಿದ್ದ ಕತ್ರಿನಾ ಕೈಫ್ ಗಣೇಶನಿಗೆ ಉಲ್ಟಾ ಆರತಿ ಮಾಡುವ ಮೂಲಕ ಎಲ್ಲೆಡೆ ಟ್ರಾಲ್ ಆಗಿದ್ದಾರೆ.
ಮುಂಬೈ : ಸಲ್ಮಾನ್ ಖಾನ್ ಮನೆಯಲ್ಲಿ ಪ್ರತೀ ವರ್ಷದಂತೆ ಈ ಬಾರಿಯೂ ಕೂಡ ಅದ್ದೂರಿಯಾಗಿ ಗಣೇಶ ಹಬ್ಬವನ್ನು ಆಚರಣೆ ಮಾಡಲಾಗಿದೆ.
ಗಣೇಶ ಹಬ್ಬಕ್ಕೆ ಹೆಚ್ಚಿನ ಸಂಖ್ಯೆಯ ಬಾಲಿವುಡ್ ನಟ ನಟಿಯರು ಆಗಮಿಸಿ ಗಣೇಶನಿಗೆ ಪೂಜೆ ಸಲ್ಲಿಸಿದ್ದಾರೆ.
ಇದೇ ವೇಳೆ ಬಾಲಿವುಡ್ ಬ್ಯೂಟಿ ಕತ್ರಿನಾ ಕೈಫ್ ತಂಗಿ ಇಸಾಬೆಲ್ಲಾಳೊಂದಿಗೆ ಸಲ್ಮಾನ್ ಮನೆಯ ಗಣೇಶ ಪೂಜೆಯಲ್ಲಿ ಪಾಲ್ಗೊಂಡಿದ್ದರು.
ಈ ವೇಳೆ ಗಣೇಶನಿಗೆ ಆರತಿ ಮಾಡುವ ವೇಳೆ ಉಲ್ಟಾ ಆರತಿ ಮಾಡಿ ಟ್ರಾಲ್ ಆಗಿದ್ದಾರೆ. ಈ ಬಗ್ಗೆ ಅತ್ಯಧಿಕ ಸಂಖ್ಯೆಯಲ್ಲಿ ಸಾಮಾಜಿಕ ಜಾಲತಾಣದಲ್ಲಿ ಕತ್ರಿನಾ ಕಾಲೆಳೆದಿದ್ದಾರೆ.
