ಕಳೆದ 20 ದಿನಗಳಿಂದ ಚೆನೈನ ಅಪೋಲೊ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡಿಯುತ್ತಿರುವ ಜಯಲಲಿತ ಅವರಿಗೆ ಗಣ್ಯಾತೀಗಣ್ಯರಿಂದ ಚೇತರಿಕೆಯ ಹಾರೈಕೆಗಳು ಕೇಳಿ ಬರುತ್ತಿವೆ.

ಅದರೆ ತಲೈವಿ ಪುರುಚ್ಚಿ ಜಯಲಲಿತ ಆರೋಗ್ಯ ವಿಚಾರಿಸಿರುವ ಮಾರ್ಕಂಡೆಯಾ ಕಾಟ್ಜು ತಮ್ಮ ಬಾಲ್ಯದ ಪ್ರೀತಿಯ ಬಗೆಗೆ ಫೇಸ್ ಬುಕ್ ನಲ್ಲಿ ಬರೆದುಕೊಂಡಿದ್ದಾರೆ.

ಆಗ ನಾನು ಯುವಕನಾಗಿದ್ದೆ, ಜಯಲಲಿತ ಕೂಡ ಸುಂದರವಾಗಿದ್ದರು. ನಾನು ಅವರ ಅಕರ್ಷಣೆಗೆ ಒಳಗಾಗಿ ಪ್ರೀತಿಯಲ್ಲಿ ಬಿದ್ದಿದೆ. ಆದರೆ ಅವರಿಗೆ ಇದು ತಿಳಿದಿರಲಿಲ್ಲ. ಜಯಲಲಿತ ಈಗಲು ಸುಂದರವಾಗಿದ್ದಾರೆ  ಅಂತ ತಮ್ಮ ಫೇಸ್ ಬುಕ್ ಖಾತೆಯಾಲ್ಲಿ ಕಾಟ್ಜು ಬರೆದುಕೊಂಡಿದ್ದರು.

ಅಲ್ಲದೆ ಅವರು ಬೇಗ ಗುಣಮುಖರಾಗಿ ಕೆಲಸಕ್ಕೆ ಬರುತ್ತಾರೆ ಅವರು ಸಿಂಹದ ತರಹ ಅವರ ಬಳಿಯಿರುವರೆಲ್ಲ ಲಂಗೂರ್ ಗಳು  ಅಂತ ಕೂಡ ಹಾಕಿದ್ದಾರೆ.  ಅದರೆ ಅದೇನಾಯ್ತೋ ಗೋತ್ತಿಲ್ಲಾ ಉಲ್ಟಾ ಹೊಡೆದಿರೊ ಕಾಟ್ಜು ಆ ಪೋಸ್ಟ್ ನ ತಮ್ಮ ಖಾತೆಯಿಂದ ಡಿಲೀಟ್ ಮಾಡಿದ್ದಾರೆ.

ಅಲ್ದೆ ತಮ್ಮ ಹೇಳಿಕೆಯನ್ನು ತಾವೇ ಅದೊಂದು ಜೋಕ್ ಎಂದು ಮತ್ತೊಂದು ಪೋಸ್ಟ್ ಹಾಕಿದ್ದಾರೆ. ಇದರಲ್ಲಿ ಜೋಕ್ ಗಳನ್ನು ಅರ್ಥ ಮಾಡಿಕೊಳ್ಳುವಲ್ಲಿ  ಬಿಹಾರಿಗಳಿಗಿಂತ ತಮಿಳರು ಸ್ಮಾರ್ಟ್ ಅಂದುಕೊಂಡಿದ್ದೆ ಅದರೆ ಅದನ್ನು ಸರಿಪಡಿಸಿ ಕೊಳ್ಳುತ್ತೇನೆ ಎಂದು ವಿವಾದಾತ್ಮಕವಾಗಿ ಹೇಳಿಕೊಂಡಿದ್ದಾರೆ.