ಶ್ರೀನಗರ[ಮೇ. 07] ನೋಯ್ಡಾದ ಖಾಸಗಿ ವಿವಿಯಿಂದ ನಾಪತ್ತೆಯಾಗಿದ್ದ ವಿದ್ಯಾರ್ಥಿಯೊಬ್ಬ ಪಾಕಿಸ್ತಾನದ ಜೈಲಿನಲ್ಲಿ ಪತ್ತೆಯಾಗಿದ್ದಾಮೆ.

ಡಿಸೆಂಬರ್ 12, 2018 ರಂದು ವಿದ್ಯಾರ್ಥಿ ನಾಪತ್ತೆಯಾಗಿದ್ದ. 23 ವರ್ಷದ ಸೈಯದ್ ವಾಹಿದ್ ಉತ್ತರ ಪ್ರದೇಶದಿಂದ ಮಿಸ್ ಆಗಿದ್ದ ಎಂದು ಪ್ರಾಥಮಿಕ ಮಾಹಿತಿ ಲಭ್ಯವಾಗಿದೆ.

ದಕ್ಷಿಣ ಕಾಶ್ಮೀರದಲ್ಲಿ ವಾಸಿಸುತ್ತಿರುವ ವಿದ್ಯಾರ್ಥಿಯ ತಂದೆ ಭಾರತದ ಪೊಲೀಸರಿಗೆ ಮಾಹಿತಿ ನೀಡಿದ್ದು ನಿಮ್ಮ ಮಗ ನಮ್ಮ ಬಳಿ ಇದ್ದಾನೆ ಎಂದು ಪಾಕಿಸ್ತಾನದಿಂದ ಕರೆ ಬಂದಿತ್ತು ಎಂದು ತಿಳಿಸಿದ್ದಾರೆ.

ವಿದ್ಯಾರ್ಥಿ ನಾಪತ್ತೆಯಾಗಿರುವ ಬಗ್ಗೆ ಮಿಸ್ಸಿಂಗ್ ದೂರು ದಾಖಲಾಗಿದೆ. ಆದರೆ ಆತ ಪಾಕಿಸ್ತಾನದಲ್ಲಿ ಸಿಕ್ಕಿಹಾಕಿಕೊಂಡಿದ್ದಾನೆಯೇ ಎಂಬ ಬಗ್ಗೆ ಪೊಲೀಸರು ಮಾಹಿತಿ ಕಲೆ ಹಾಕುತ್ತಿದ್ದಾರೆ.