ಇತ್ತೀಚೆಗಷ್ಟೇ ಬಂಧಿತನಾದ ಕಾಶ್ಮೀರ ಉಗ್ರನೊಬ್ಬ, ಹಿಂಸಾತ್ಮಕ ಕೃತ್ಯಗಳಿಂದ ದೂರ ಉಳಿಯುವಂತೆ ತನ್ನ ಸಹಚರರಿಗೆ ಮನವಿ ಮಾಡಿಕೊಂಡಿದ್ದಾನೆ. ಇದರ ವಿಡಿಯೋ ಸಾಮಾಜಿಕ ಮಾಧ್ಯಮಗಳಲ್ಲಿ ಭಾರೀ ವೈರಲ್ ಆಗಿದೆ.

ಶ್ರೀನಗರ: ಇತ್ತೀಚೆಗಷ್ಟೇ ಬಂಧಿತನಾದ ಕಾಶ್ಮೀರ ಉಗ್ರನೊಬ್ಬ, ಹಿಂಸಾತ್ಮಕ ಕೃತ್ಯಗಳಿಂದ ದೂರ ಉಳಿಯುವಂತೆ ತನ್ನ ಸಹಚರರಿಗೆ ಮನವಿ ಮಾಡಿಕೊಂಡಿದ್ದಾನೆ. 

ಇದರ ವಿಡಿಯೋ ಸಾಮಾಜಿಕ ಮಾಧ್ಯಮಗಳಲ್ಲಿ ಭಾರೀ ವೈರಲ್ ಆಗಿದೆ. ವಿಡಿಯೋದಲ್ಲಿ ತನ್ನನ್ನು ತಾನು ಐಜಿಜ್ ಅಹ್ಮದ್ ಗೊಜ್ರಿ ಎಂದು ಹೇಳಿಕೊಂಡ ಸೇನಾ ವಶದಲ್ಲಿರುವ ಆರೋಪಿ, ‘ಪಾಕಿಸ್ತಾನ, ಯುವ ಜನರನ್ನು ದಾರಿ ತಪ್ಪಿಸುವ ಕೆಲಸ ಮಾಡುತ್ತಿದೆ. 

ಹೀಗಾಗಿ ತಪ್ಪು ದಾರಿ ಹಿಡಿದ ನನ್ನ ಸ್ನೇಹಿತರಾದ ಸುಹೇಬ್ ಅಖೂನ್, ಮೊಹ್ಸಿನ್ ಮುಷ್ತಾಕ್ ಭಟ್ ಮತ್ತು ನಾಸೀರ್ ಅಮಿನ್ ಡ್ರಾಜಿ ಅವರು ಪುನಃ ತಮ್ಮ ಕುಟುಂಬಗಳಿಗೆ ಮರಳಬೇಕು,’ ಎಂದಿದ್ದಾನೆ.