ಉಗ್ರವಾದ ಬಿಟ್ಟು ಪೊಲೀಸರಿಗೆ ಶರಣಾದ ಯುವಕ

First Published 3, Mar 2018, 11:07 AM IST
Kashmir Militant returns home after mothers appeal
Highlights

ಹಿಂಸಾಚಾರ ತ್ಯಜಿಸಿ ಮನೆಗೆ ಮರಳುವಂತೆ ತಾಯಿಯ ಮನವಿಗೆ ಓಗೊಟ್ಟ ಯುವಕನೊಬ್ಬ ಪೊಲೀಸರಿಗೆ ಶರಣಾದ ಘಟನೆ ಜಮ್ಮು ಮತ್ತು ಕಾಶ್ಮೀರದಲ್ಲಿ ನಡೆದಿದೆ.

ಜಮ್ಮು/ಶ್ರೀನಗರ: ಹಿಂಸಾಚಾರ ತ್ಯಜಿಸಿ ಮನೆಗೆ ಮರಳುವಂತೆ ತಾಯಿಯ ಮನವಿಗೆ ಓಗೊಟ್ಟ ಯುವಕನೊಬ್ಬ ಪೊಲೀಸರಿಗೆ ಶರಣಾದ ಘಟನೆ ಜಮ್ಮು ಮತ್ತು ಕಾಶ್ಮೀರದಲ್ಲಿ ನಡೆದಿದೆ. ಇತ್ತೀಚೆಗಷ್ಟೇ ಇದೇ ರೀತಿ ಕುಟುಂಬ ಸದಸ್ಯರ ಮನವಿಗೆ ಓಗೊಟ್ಟು 4 ಯುವಕರು ಉಗ್ರವಾದ ತ್ಯಜಿಸಿ ಮುಖ್ಯವಾಹಿನಿಗೆ ಮರಳಿದ್ದರು.

ಅದರ ಬೆನ್ನಲ್ಲೇ ಇದೀಗ ಮತ್ತೋರ್ವ ಯುವಕ, ಹಿಂಸೆ ತ್ಯಜಿಸುವ ನಿರ್ಧಾರ ಕೈಗೊಂಡಿದ್ದಾನೆ. ಉಗ್ರ ಚಟುವಟಿಕೆಯನ್ನು ಬಿಟ್ಟು ಶರಣಾಗತರಾಗುವ ಸ್ಥಳೀಯರನ್ನು ಸ್ವೀಕರಿಸುವುದಾಗಿ ಕಳೆದ ವರ್ಷ ಪೊಲೀಸರು ಪ್ರಕಟಿಸಿದ ಬಳಿಕ ಇದುವರೆಗೆ 12ಕ್ಕೂ ಹೆಚ್ಚು ಉಗ್ರರು ಶಸ್ತ್ರಾಸ್ತ್ರಗಳನ್ನು ತ್ಯಜಿಸಿದ್ದಾರೆ.

loader