ಶ್ರೀನ​ಗ​ರ[ಆ.12]: ಸಂವಿ​ಧಾ​ನದ 370 ನೇ ವಿಧಿ ರದ್ದಿನಿಂದ ಉಂಟಾ​ಗ​ಬ​ಹು​ದಾದ ಸಂಭಾವ್ಯ ಹಿಂಸಾಚಾರ ತಪ್ಪಿ​ಸಲು, ಮುನ್ನೆ​ಚ್ಚ​ರಿಕಾ ಕ್ರಮ​ವಾಗಿ ಜಮ್ಮು ಕಾಶ್ಮೀ​ರ​ದಾ​ದ್ಯಂತ ವಿಧಿಸಲಾಗಿದ್ದ ನಿಷೇ​ಧಾ​ಜ್ಞೆ​ಯಿಂದಾಗಿ ಕಳೆದ ಒಂದು ವಾರ​ದಲ್ಲಿ ಸುಮಾರು 1000 ಕೋಟಿಯಷ್ಟು ವ್ಯಾಪಾರವನ್ನು ಉದ್ಯ​ಮಿ​ಗಳು ಕಳೆ​ದು​ಕೊಂಡಿ​ದ್ದಾ​ರೆ.

ನಿಷೇ​ಧಾಜ್ಞೆ ವಿಧಿ​ಸಿ​ದ್ದ​ರಿಂದ ಜನ ಜೀವನ ಸ್ಥಬ್ದ​ಗೊಂಡಿತ್ತು, ಇದ​ರಿಂದ ದಿನ​ನಿತ್ಯ ಕನಿಷ್ಠ 175 ಕೋಟಿ ರು. ನಷ್ಟಉಂಟಾ​ಗಿದೆ ಎಂದು ಕಾಶ್ಮೀರ ವಾಣಿಜ್ಯ ಮತ್ತು ಕೈಗಾರಿಕಾ ಮಂಡಳಿ ತಿಳಿ​ಸಿದೆ. ನಿಷೇ​ಧಾ​ಜ್ಞೆ​ಯಿಂದಾಗಿ ಬೇಕರಿ ಹಾಗೂ ಜಾನು​ವಾರು ಉದ್ಯ​ಮಿ​ಗಳು ಹೆಚ್ಚಿನ ತೊಂದರೆ ಅನು​ಭ​ವಿ​ಸಿದ್ದು, ಜನ ಮನೆ​ಯಿಂದ ಹೊರಗೆ ಬಾರದೆ ಇದ್ದುದ್ದು ಹಾಗೂ ಅವು​ಗ​ಳಿಗೆ ಕಡಿಮೆ ಬಾಳಿಕೆ ಇರು​ವು​ದ​ರಿಂದ ಸುಮಾರು 200 ಕೋಟಿ ಕಳೆ​ದು​ಕೊಂಡಿದ್ದಾರೆ ಎಂದು ಮಂಡಳಿ ಹೇಳಿ​ದೆ.

ಬಕ್ರೀದ್‌ ವೇಳೆ​ಯಲ್ಲೇ ನಿಷೇ​ಧಾಜ್ಞೆ ಇದ್ದಿ​ದ್ದ​ರಿಂದ ಆಡು, ಕುರಿ ಹಾಗೂ ಮೇಕೆ ಮಾರಾಟ ಭಾರೀ ಕುಸಿತ ಕಂಡಿದೆ.