ಜಮ್ಮು[ಜು.30]: ಜಮ್ಮು-ಕಾಶ್ಮೀ​ರದ ಗಡಿ​ರೇ​ಖೆ​ಗುಂಟ ಪಾಕಿ​ಸ್ತಾ​ನದ ಸೇನೆ ನಡೆ​ಸು​ತ್ತಿ​ರುವ ಅಪ್ರ​ಚೋ​ದಿತ ಗುಂಡಿನ ದಾಳಿ, ಮಾರ್ಟರ್‌ ಹಾಗೂ ಶೆಲ್‌ ದಾಳಿಗೆ 10 ದಿನ​ಗಳ ಹಸು​ಗೂ​ಸೊಂದು ಸೋಮ​ವಾರ ಬಲಿ​ಯಾ​ದ ಹೃದಯ ವಿದ್ರಾ​ವಕ ಘಟನೆ ನಡೆ​ದಿದೆ.

ಕಾಶ್ಮೀ​ರದ ಪೂಂಚ್‌ ಜಿಲ್ಲೆಯ ಶಹಾ​ಪುರ ಸೆಕ್ಟ​ರ್‌​ನಲ್ಲಿ ಈ ಘಟನೆ ಭಾನು​ವಾರ ತಡ​ರಾತ್ರಿ ನಡೆ​ದಿದೆ. ಪಾಕ್‌ ಕಡೆ​ಯಿಂದ ನಡೆದ ತೀವ್ರ​ತ​ರ​ವಾದ ಶೆಲ್‌ ದಾಳಿ​ಯಿಂದ ಮಗು, ಅದರ ತಾಯಿ ಫಾತಿಮಾ ಜಾನ್‌ (35) ಹಾಗೂ ಇನ್ನೋರ್ವ ನಾಗ​ರೀಕ ಮೊಹ​ಮ್ಮದ್‌ ಆರೀಫ್‌ (40) ಗಾಯ​ಗೊಂಡಿ​ದ್ದರು.

ಕೂಡಲೇ ಪೂಂಚ್‌ ಜಿಲ್ಲಾ​ಸ್ಪ​ತ್ರೆಗೆ ಮಗು​ವನ್ನು ದಾಖ​ಲಿ​ಸ​ಲಾ​ಯಿ​ತಾ​ದರೂ ಚಿಕಿತ್ಸೆ ಫಲಿ​ಸದೇ ಮಗು ಸಾವ​ನ್ನ​ಪ್ಪಿದೆ.