Asianet Suvarna News Asianet Suvarna News

ಲಿಂಗಾಯತ ‘ಸ್ವತಂತ್ರ ಧರ್ಮ': ಕಾಶೀಪೀಠದ ಶ್ರೀಗಳ ವಿರೋಧ

ಇದರ ಬದಲು ದೇಶದ ಒಟ್ಟು ಜನಸಂಖ್ಯೆಯಲ್ಲಿ ಅಲ್ಪಸಂಖ್ಯಾತರಾಗಿರುವ ವೀರಶೈವ ಲಿಂಗಾಯತ ಧರ್ಮದವರು ಅಲ್ಪಸಂಖ್ಯಾತ ಧರ್ಮದ ಸೌಲಭ್ಯಕ್ಕಾಗಿ ಯತ್ನಿಸಬೇಕು. ಇದರಿಂದ ಧರ್ಮ ವಿಭಜನೆ ತಪ್ಪಲಿದೆ ಎಂದು ಸ್ವಾಮೀಜಿ ಸಲಹೆ ನೀಡಿದರು.

Kashi Sri Opposes Separate Religion Status to Lingayat Religion

ಕಲಬುರಗಿ: ವೀರಶೈವ ಲಿಂಗಾಯತ ‘ಸ್ವತಂತ್ರ ಧರ್ಮ' ಎಂದು ಘೋಷಿಸುವಂತೆ ಕೇಂದ್ರ ಸರ್ಕಾರಕ್ಕೆ ರಾಜ್ಯವು ಶಿಫಾರಸು ಮಾಡಲು ಮುಂದಾಗಿರುವುದು ಅನಗತ್ಯ ಎಂದು ಕಾಶೀ ಪೀಠದ ಜಗದ್ಗುರು ಡಾ.ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ ಅಭಿಪ್ರಾಯಪಟ್ಟಿದ್ದಾರೆ.

ನಗರದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ ವೀರಶೈವ, ಲಿಂಗಾಯತ ಧರ್ಮಗಳು ಬೇರೆ ಬೇರೆ ಅಲ್ಲ. ಸ್ವತಂತ್ರ ಧರ್ಮ ಘೋಷಣೆಯಿಂದ ಆಗುವ ಸಮಸ್ಯೆಗಳ ಬಗ್ಗೆ ಹಿರಿಯ ವಿದ್ವಾಂಸ ಡಾ. ಎಂ. ಚಿದಾನಂದಮೂರ್ತಿ ಅವರು ಕೃತಿಯೊಂದನ್ನು ರಚಿಸಿದ್ದಾರೆ. ವೀರಶೈವ ಲಿಂಗಾಯತರು ‘ಸ್ವತಂತ್ರಧರ್ಮ' ಘೋಷಣೆ ಹೆಸರಲ್ಲಿ ಸನಾತನ ಹಿಂದೂಧರ್ಮ ವಿಭಜನೆಗೆ ಯತ್ನಿಸುವುದು ತರವಲ್ಲ ಎಂದು ಹೇಳಿದರು.

ಇದರ ಬದಲು ದೇಶದ ಒಟ್ಟು ಜನಸಂಖ್ಯೆಯಲ್ಲಿ ಅಲ್ಪಸಂಖ್ಯಾತರಾಗಿರುವ ವೀರಶೈವ ಲಿಂಗಾಯತ ಧರ್ಮದವರು ಅಲ್ಪಸಂಖ್ಯಾತ ಧರ್ಮದ ಸೌಲಭ್ಯಕ್ಕಾಗಿ ಯತ್ನಿಸಬೇಕು. ಇದರಿಂದ ಧರ್ಮ ವಿಭಜನೆ ತಪ್ಪಲಿದೆ ಎಂದು ಸ್ವಾಮೀಜಿ ಸಲಹೆ ನೀಡಿದರು. ಮುಂಬರುವ ಜು.9 ರಂದು ರಾಜಸ್ಥಾನದ ಜೈಪುರ ಬಳಿಯ ಲಾಲಸೋತ್‌ ಸಮೀಪ ಅಲ್ಲಿನ ವೀರಶೈವರು ಗುರುಪೂಜೆ ಕಾರ್ಯಕ್ರಮ ಏರ್ಪಡಿಸಿದ್ದಾರೆ.

ಕಾರ್ಯಕ್ರಮದಲ್ಲಿ ಸುಮಾರು 500 ಜನರಿಗೆ ಲಿಂಗದೀಕ್ಷೆ ನೀಡಲಾಗುವುದು. ದಕ್ಷಿಣದಂತೆ ಉತ್ತರಭಾರತದಲ್ಲೂ ವೀರಶೈವ ಧರ್ಮೀಯರು ಸಾಕಷ್ಟಿದ್ದಾರೆ. ರಾಜಸ್ಥಾನದಲ್ಲಿ 50 ಸಾವಿರ, ಹರಿಯಾಣದಲ್ಲಿ 6 ಸಾವಿರ, ಪಂಜಾಬ್‌ದಲ್ಲಿ 3ರಿಂದ 4 ಸಾವಿರ, ಗುಜರಾತ್‌ನಲ್ಲಿ 2 ರಿಂದ 3 ಸಾವಿರ ಹಾಗೂ ರಾಜಧಾನಿ ದೆಹಲಿಯಲ್ಲೂ ಹೆಚ್ಚಿನ ಸಂಖ್ಯೆಂಯಲ್ಲಿ ವೀರಶೈವರು ಇದ್ದಾರೆ ಎಂದು ಸ್ವಾಮೀಜಿ ತಿಳಿಸಿದರು.

Latest Videos
Follow Us:
Download App:
  • android
  • ios