Asianet Suvarna News Asianet Suvarna News

ನಾಲ್ವರು ಐಎಎಸ್ ಅಧಿಕಾರಿಗಳ ವಿರುದ್ಧ ಕೆಎಎಸ್ ಅಧಿಕಾರಿ ಮಥಾಯಿ ಲೋಕಾಯುಕ್ತಕ್ಕೆ ದೂರು

ಸಕಾಲ ಯೋಜನೆಯ ಅಧೀನ ಕಾರ್ಯದರ್ಶಿಯಾಗಿರುವ 56 ವರ್ಷದ ಕೆ.ಮಥಾಯಿ ಕಳೆದ 10 ವರ್ಷದಲ್ಲಿ 50ಕ್ಕೂ ಹೆಚ್ಚು ಬಾರಿ ಟ್ರಾನ್ಸ್'ಫರ್ ಆಗಿದ್ದಾರೆ. ಭ್ರಷ್ಟಾಚಾರದ ವಿರುದ್ಧ ಹೋರಾಟ ನಡೆಸುವ ಪ್ರಾಮಾಣಿಕ ಅಧಿಕಾರಿಗಳಿಗೆ ಟ್ರಾನ್ಸ್'ಫರ್ ಶಿಕ್ಷೆ ಸರ್ವೇಸಾಮಾನ್ಯವಾಗಿರುತ್ತದೆ.

kas officer k mathai files complaint to lokayukta against 4 ias officers

ಬೆಂಗಳೂರು(ಮೇ 24): ಅನುರಾಗ್ ತಿವಾರಿ ಸಾವು ಪ್ರಕರಣದಲ್ಲಿ ಕರ್ನಾಟಕದ ಐಎಎಸ್ ಮಾಫಿಯಾ ಕೈವಾಡ ಇದೆ ಎಂಬ ಆರೋಪ ಕೇಳಿಬರುತ್ತಿರುವ ಮಧ್ಯೆಯೇ ಇದೀಗ ಕೆಲ ಐಎಎಸ್ ಅಧಿಕಾರಿಗಳ ವಿರುದ್ಧ ಲೋಕಾಯುಕ್ತಕ್ಕೆ ದೂರು ದಾಖಲಾಗಿದೆ. ಕೆಎಎಸ್ ಅಧಿಕಾರಿ ಕೆ.ಮಥಾಯಿ ಅವರು ನಾಲ್ವರು ಐಎಎಸ್ ಅಧಿಕಾರಿಗಳ ವಿರುದ್ಧ ಲೋಕಾಯುಕ್ತಕ್ಕೆ ದೂರು ನೀಡಿದ್ದಾರೆ. ಬಿಬಿಎಂಪಿಯಲ್ಲಿ ಕೆಲ ಅವ್ಯವಹಾರಗಳನ್ನು ಬಯಲಿಗೆಳೆದಿದ್ದಕ್ಕೆ ಈ ಅಧಿಕಾರಿಗಳು ಕಿರುಕುಳ ನೀಡುತ್ತಿದ್ದಾರೆ ಎಂದು ಮಥಾಯಿ ಆರೋಪಿಸಿದ್ದಾರೆ.

ದೂರು ದಾಖಲಿಸಲಾದ ಅಧಿಕಾರಿಗಳು:
1) ಡಾ. ಕಲ್ಪನಾ, ಸಕಾಲ ಯೋಜನೆಯ ಮಿಷನ್ ಡೈರೆಕ್ಟರ್
2) ಎಂ.ಲಕ್ಷ್ಮೀನಾರಾಯಣ, ಲೋಕೋಪಯೋಗಿ ಮತ್ತು ವಾರ್ತಾ ಇಲಾಖೆ ಪ್ರಧಾನ ಕಾರ್ಯದರ್ಶಿ
3) ಟಿ.ಕೆ. ಅನಿಲ್ ಕುಮಾರ್, ಸಿಬ್ಬಂದಿ ಮತ್ತು ಆಡಳಿತ ಇಲಾಖೆ ಕಾರ್ಯದರ್ಶಿ
4) ಇ.ವಿ.ರಮಣರೆಡ್ಡಿ, ಕಂದಾಯ ಇಲಾಖೆ ಪ್ರಧಾನ ಕಾರ್ಯದರ್ಶಿ.

ಸದ್ಯ, ಸಕಾಲ ಯೋಜನೆಯ ಅಧೀನ ಕಾರ್ಯದರ್ಶಿಯಾಗಿರುವ 56 ವರ್ಷದ ಕೆ.ಮಥಾಯಿ ಈವರೆಗೆ 60 50ಕ್ಕೂ ಹೆಚ್ಚು ಬಾರಿ ಟ್ರಾನ್ಸ್'ಫರ್ ಆಗಿದ್ದಾರೆ. ಭ್ರಷ್ಟಾಚಾರದ ವಿರುದ್ಧ ಹೋರಾಟ ನಡೆಸುವ ಪ್ರಾಮಾಣಿಕ ಅಧಿಕಾರಿಗಳಿಗೆ ಟ್ರಾನ್ಸ್'ಫರ್ ಶಿಕ್ಷೆ ಸರ್ವೇಸಾಮಾನ್ಯವಾಗಿರುತ್ತದೆ.

Follow Us:
Download App:
  • android
  • ios