ಮಂಡ್ಯ ಹಾಗೂ ಕಲಬುರಗಿಯ ಪೊಲೀಸರ ಜಂಟಿಕಾರ್ಯಾಚರಣೆ ನಡೆಸಿ ಭೀಮಾನಾಯ್ಕ್ ನನ್ನ ಬಂಧಿಸಿದ್ದು, ಕಲಬುರಗಿಯ ಅಶೋಕ ನಗರ ಠಾಣೆಯಲ್ಲಿ ಆರೋಪಿಯ ವಿಚಾರಣೆ ನಡೆಸಲಾಗುತ್ತಿದೆ.

ಕಲಬುರಗಿ(ಡಿ.11): ಕೆಎಎಸ್ ಅಧಿಕಾರಿ ಭೀಮಾನಾಯ್ಕ್ ಕೊನೆಗೂ ಪೊಲೀಸರ ಬಲೆಗೆ ಬಿದ್ದಿದ್ದಾನೆ. ಹುಮ್ನಾಬಾದ್ ನಿಂದ ರಾತ್ರಿ 2 ಗಂಟೆ ವೇಳೆಗೆ ಕಲಬುರಗಿಗೆ ಆಗಮಿಸುತ್ತಿದ್ದ ಭೀಮಾನಾಯ್ಕ್ ನನ್ನ ಖಚಿತ ಮಾಹಿತಿ ಮೇರೆಗೆ ಬಂಧಿಸಿದ್ದಾರೆ. ಮಂಡ್ಯ ಹಾಗೂ ಕಲಬುರಗಿಯ ಪೊಲೀಸರ ಜಂಟಿಕಾರ್ಯಾಚರಣೆ ನಡೆಸಿ ಭೀಮಾನಾಯ್ಕ್ ನನ್ನ ಬಂಧಿಸಿದ್ದು, ಕಲಬುರಗಿಯ ಅಶೋಕ ನಗರ ಠಾಣೆಯಲ್ಲಿ ಆರೋಪಿಯ ವಿಚಾರಣೆ ನಡೆಸಲಾಗುತ್ತಿದೆ. ನಾಯ್ಕ್ ಕಾರು ಚಾಲಕ ರಮೇಶ್ ಗೌಡ ತನಗೆ ಭೀಮಾನಾಯ್ಕ್ ಕಿರುಕುಳ ನೀಡುತ್ತಿದ್ದರು ಎಂದು ಆರೋಪಿಸಿ ಮಂಡ್ಯದ ಮದ್ದೂರಿನಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದ. ಅಲ್ಲದೇ, ಡೆತ್ ನೋಟ್ ನಲ್ಲಿ ಭೀಮಾನಾಯ್ಕ್, ಮಾಜಿ ಸಚಿವ ಜನಾರ್ದನ ರೆಡ್ಡಿ ಅವರ ಹೆಸರನ್ನೂ ಉಲ್ಲೇಖಿಸಿದ್ದ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred