ಸ್ಟಾಲಿನ್ ಕಿವಿಯಲ್ಲಿ ಕೊನೆ ಆಸೆ ಹೇಳಿದ್ದ‘ನಿಧಿ’!

https://static.asianetnews.com/images/authors/56bf5dcb-7868-50e0-b2d0-38391a34809d.jpg
First Published 8, Aug 2018, 12:47 PM IST
karunanidhi last wish to make hospital for poor
Highlights

ಕಲೈನರ್ ಕರುಣಾನಿಧಿ ಕೊನೆ ಆಸೆ ಏನು?! ಆಸ್ಪತ್ರೆಯಲ್ಲಿ ಸ್ಟಾಲಿನ್ ಕಿವಿಯಲ್ಲಿ ಹೇಳಿದ್ದೇನು?! ಪೂವಿರ್ಕರ ನಿಧಿ ಸದ್ಬಳಕೆಗೆ ‘ನಿಧಿ’ಯೋಜನೆ! ಬಡವರಿಗಾಗಿ ಆಸ್ಪತ್ರೆ ಕಟ್ಟ ಬಯಸಿದ್ದರು ನಿಧಿ 
 

ಚೆನ್ನೈ(ಆ.8): ಅನಾರೋಗ್ಯದ ಹಿನ್ನೆಲೆಯಲ್ಲಿ ಕಳೆದ ಎರಡು ವಾರಗಳಿಂದ ಚೆನ್ನೈನ ಕಾವೇರಿ ಆಸ್ಪತ್ರೆಗೆ ದಾಖಲಾಗಿದ್ದ ಎಂ.ಕರುಣಾನಿಧಿ ನಿನ್ನೆ ಸಂಜೆ ಇಹಲೋಕ ತ್ಯಜಿಸಿದರು. ಕರುಣಾನಿಧಿ ನಿಧನದಿಂದ ತಮಿಳುನಾಡು ಶೋಕ ಸಾಗರದಲ್ಲಿ ಮುಳುಗಿದೆ. ಕಲೈನರ್ ನಿಧನದಿಂದ ದ್ರಾವಿಡ ಚಳವಳಿಯ ಪ್ರಮುಖ ಮತ್ತು ಕೊನೆಯ ಕೊಂಡಿ ಕಳಚಿ ಬಿದ್ದಂತಾಗಿದೆ.

ಈ ಮಧ್ಯೆ ಕರುಣಾನಿಧಿ ಆಸ್ಪತ್ರೆಯಲ್ಲಿದ್ದಾಗ ತಮ್ಮ ಕೊನೆಯ ಆಸೆಯನ್ನು ಪುತ್ರ ಎಂ.ಕೆ. ಸ್ಟಾಲಿನ್ ಅವರಿಗೆ ತಿಳಿಸಿದ್ದು, ತಮ್ಮ ಪೂರ್ವಿಕರ ಜಮೀನಿನಲ್ಲಿ ಬಡವರಿಗಾಗಿ ಆಸ್ಪತ್ರೆಯನ್ನು ಕಟ್ಟಿಸಲು ಬಯಸಿದ್ದರು ಎನ್ನಲಾಗಿದೆ.

ಕರುಣಾನಿಧಿ ಜನಿಸಿದ ಗ್ರಾಮದಲ್ಲಿ ಅವರ ಪೂರ್ವಿಕರ ಆಸ್ತಿ ಇದ್ದು, ಅದನ್ನು ಈಗಾಗಲೇ ಕರುಣಾನಿಧಿ ಟ್ರಸ್ಟ್ ಗೆ ದಾನ ಮಾಡಿದ್ದಾರೆ. ಈ ಜಾಗದಲ್ಲಿ ಬಡವರಿಗಾಗಿ ಉಚಿತ ಚಿಕಿತ್ಸೆ ನೀಡುವ ಆಸ್ಪತ್ರೆ ಕಟ್ಟಿಸುವುದು ಅವರ ಕನಸಾಗಿತ್ತು.

ಇಷ್ಟೇ ಅಲ್ಲದೇ ಚೆನ್ನೈನಲ್ಲಿರುವ ತಮ್ಮ ಮನೆಯನ್ನೂ ಆಸ್ಪತ್ರೆಯನ್ನಾಗಿ ಪರಿವರ್ತಿಸಬೇಕು ಎಂಬುದು ಕರುಣಾನಿಧಿ ಅವರ ಕೊನೆ ಆಸೆಯಾಗಿತ್ತು ಎಂಬುದು ಇದೀಗ ಬಯಲಾಗಿದೆ.

ತಮ್ಮ ಜೀವನದುದ್ದಕ್ಕೂ ಬಡವರ ಪರ ರಾಜಕಾರಣ ಮಾಡಿದ ಕರುಣಾನಿಧಿ, ಕೊನೆ ಕ್ಷಣದವರೆಗೂ ಬಡವರ ಕುರಿತಾಗಿಯೇ ಚಿಂತಿಸುತ್ತಿದ್ದರು ಮತ್ತು ಅವರ ಹೃದಯ ಬಡವರ ಪರವಾಗಿಯೇ ತುಡಿಯುತ್ತಿತ್ತು ಎಂಬುದು ಅವರ ಮೇಲಿನ ಗೌರವವನ್ನು ಮತ್ತಷ್ಟು ಹೆಚ್ಚಿಸಿದೆ ಎಂದರೆ ಅತೀಶೋಕ್ತಿಯಾಗಲಾರದು. 
 

loader