ಕರುಣಾನಿಧಿಯವರಿಗೆ ವಿಶ್ರಾಂತಿಯ ಅಗತ್ಯವಿದೆಯೆಂದು ವೈದ್ಯರು ಹೇಳಿದ್ದು, ಯಾರೂ ಕೂಡ ಅವರನ್ನು ಭೇಟಿಯಾಗಬಾರದೆಂದು ಪಕ್ಷವು ಕಳೆದ ತಿಂಗಳು ಹೇಳಿಕೆ ನೀಡಿತ್ತು.

ಚೆನ್ನೈ(ಡಿ. 01): ತಮಿಳುನಾಡಿನ ಮಾಜಿ ಸಿಎಂ ಹಾಗೂ ಡಿಎಂಕೆ ಮುಖ್ಯಸ್ಥ ಎಂ.ಕರುಣಾನಿಧಿ ಇಂದು ಆಸ್ಪತ್ರೆಗೆ ದಾಖಲಾಗಿರುವ ಸಂಗತಿ ವರದಿಯಾಗಿದೆ. ಈಗ್ಗೆ ಕೆಲವಾರು ದಿನಗಳಿಂದಲೂ ಕರುಣಾನಿಧಿಯವರು ಅಲರ್ಜಿ ಸಮಸ್ಯೆಗಳಿಂದ ಬಳಲುತ್ತಿದ್ದರೆನ್ನಲಾಗಿದೆ. ಕಾವೇರಿ ಆಸ್ಪತ್ರೆಯಲ್ಲಿ ಅವರನ್ನು ದಾಖಲಾಗಿದ್ದು, ಆರೋಗ್ಯ ಸ್ಥಿರವಾಗಿದೆ ಎಂದು ಡಿಎಂಕೆ ಮೂಲಗಳು ತಿಳಿಸಿರುವುದಾಗಿ ಎನ್'ಡಿಟಿವಿ ವರದಿ ಮಾಡಿದೆ.

ಕಾವೇರಿ ಆಸ್ಪತ್ರೆಯ ವೈದ್ಯರೂ ಕೂಡ ಕರುಣಾನಿಧಿಯವರ ಆರೋಗ್ಯದಲ್ಲಿ ಗಂಭೀರ ಪರಿಸ್ಥಿತಿ ಇಲ್ಲದಿರುವುದನ್ನು ಸ್ಪಷ್ಟಪಡಿಸಿದ್ದಾರೆ. ಕರುಣಾನಿಧಿಯವರು ಇನ್ನು ಕೆಲ ದಿನಗಳ ಕಾಲ ಆಸ್ಪತ್ರೆಯಲ್ಲಿ ದಾಖಲಾಗಿರಬಹುದೆಂಬ ಮಾಹಿತಿ ಲಭಿಸಿದೆ.

ಕಳೆದ ಒಂದು ತಿಂಗಳಿನಿಂದ ಡಿಎಂಕೆ ಮುಖ್ಯಸ್ಥರು ಸಾರ್ವಜನಿಕವಾಗಿ ಕಾಣಿಸಿಕೊಂಡಿರಲಿಲ್ಲ. ಕರುಣಾನಿಧಿಯವರಿಗೆ ವಿಶ್ರಾಂತಿಯ ಅಗತ್ಯವಿದೆಯೆಂದು ವೈದ್ಯರು ಹೇಳಿದ್ದು, ಯಾರೂ ಕೂಡ ಅವರನ್ನು ಭೇಟಿಯಾಗಬಾರದೆಂದು ಪಕ್ಷವು ಕಳೆದ ತಿಂಗಳು ಹೇಳಿಕೆ ನೀಡಿತ್ತು.