ಜಯಾಲಲಿತಾರಂತೆ ಕರುಣಾನಿಧಿ  ತಮಿಳು ಜನರ ಧ್ವನಿಯಾಗಿದ್ದರು. ಆ ಧ್ವನಿಗೆ ಮರೀನಾ ಬೀಚ್ ನಲ್ಲಿ ಸ್ಥಳ ಸಿಗಬೇಕು. ಈ ದುಖ:ಕರ ಸನ್ನಿವೇಶದಲ್ಲಿ ತಮಿಳು ನಾಯಕರು ಹೃದಯವೈಶಾಲ್ಯ ಮೆರೆಯುತ್ತಾರೆ ಎಂಬ ವಿಶ್ವಾಸ ತನಗಿದೆಯೆಂದು ರಾಹುಲ್ ಗಾಂಧಿ ಹೇಳಿದ್ದಾರೆ.

ನವದೆಹಲಿ: ತಮಿಳುನಾಡು ಮಾಜಿ ಸಿಎಂ ಕರುಣಾನಿಧಿ ಅಂತ್ಯ ಸಂಸ್ಕಾರಕ್ಕೆ ಜಾಗ ನಿಗದಿ ಮಾಡುವ ವಿಚಾರಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಪ್ರತಿಕ್ರಿಯಿಸಿದ್ದಾರೆ.

ಒಂದು ಕಡೆ ಮದ್ರಾಸ್ ಹೈಕೋರ್ಟ್ ಅಂತ್ಯಸಂಸ್ಕಾರ ನಡೆಸುವ ಸ್ಥಳದ ಬಗ್ಗೆ ವಿಚಾರಣೆ ಆರಂಭಿಸಿದ್ದು, ಇನ್ನೊಂದು ಕಡೆ ಟ್ವೀಟ್ ಮಾಡಿರುವ ರಾಹುಲ್ ಗಾಂಧಿ, ಜಯಾಲಲಿತಾರಂತೆ ಕರುಣಾನಿಧಿಯವರಿಗೂ ಮರೀನಾ ಬೀಚ್ ನಲ್ಲಿರುವ ಅಣ್ಣಾ ಸ್ಮಾರಕದ ಬಳಿ ಹೂಳಲು ಜಾಗ ಸಿಗಬೇಕು ಎಂದು ಹೇಳಿದ್ದಾರೆ.

Scroll to load tweet…

ಜಯಾಲಲಿತಾರಂತೆ ಕರುಣಾನಿಧಿ ತಮಿಳು ಜನರ ಧ್ವನಿಯಾಗಿದ್ದರು. ಆ ಧ್ವನಿಗೆ ಮರೀನಾ ಬೀಚ್ ನಲ್ಲಿ ಸ್ಥಳ ಸಿಗಬೇಕು. ಈ ದುಖ:ಕರ ಸನ್ನಿವೇಶದಲ್ಲಿ ತಮಿಳು ನಾಯಕರು ಹೃದಯವೈಶಾಲ್ಯ ಮೆರೆಯುತ್ತಾರೆ ಎಂಬ ವಿಶ್ವಾಸ ನನಗಿದೆಯೆಂದು ಅವರು ಹೇಳಿದ್ದಾರೆ.

ತಮಿಳುನಾಡು ಸರ್ಕಾರ ಮರೀನಾ ಬೀಚ್ ನಲ್ಲಿ ಅಂತ್ಯಸಂಸ್ಕಾರಕ್ಕೆ ಅವಕಾಶ ನಿರಾಕರಿಸಿತ್ತು. ಆರೆಸ್ಸೆಸ್ ಕೂಡಾ ಡಿಎಂಕೆಯ ನಡೆಯನ್ನು ವಿರೋಧಿಸಿದ್ದು, ಮರೀನಾ ಬೀಚ್ ನಲ್ಲಿ ಕಲೈನಾರ್ ಅಂತ್ಯಸಂಸ್ಕಾರಕ್ಕೆ ಅವಕಾಶ ನೀಡಬಾರದೆಂದು ಅದು ಆಗ್ರಹಿಸಿತ್ತು.

ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ಹಾಗೂ ದ್ರಾವಿಡ ಮುನ್ನೇತ್ರ ಕಳಗಂ (DMK) ಪಕ್ಷದ ಪರಮೋಚ್ಛ ನೇತಾರ ಮುತ್ತುವೇಲ್ ಕರುಣಾನಿಧಿ ಮಂಗಳವಾರ ಸಾಯಂಕಾಲ ಚೆನ್ನೈನಲ್ಲಿರುವ ಕಾವೇರಿ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ. ಅವರಿಗೆ 94 ವರ್ಷ ವಯಸ್ಸಾಗಿತ್ತು.