ತಮಿಳುನಾಡಿನಲ್ಲಿ ಗಜಾ ಚಂಡಮಾರುತದ ಅಬ್ಬರ ಮುಂದುವರೆದಿದ್ದು, ತಿರುವರೂರ್ ಬಳಿಯ ತಿರುಕುವಲೈ ನಲ್ಲಿನ ಡಿಎಂಕೆ ಸ್ಥಾಪಕ ದಿವಂಗತ ಎಂ. ಕರುಣಾನಿಧಿ ಅವರ ಪೂರ್ವಜರು ವಾಸಿಸುತ್ತಿದ್ದ ಮನೆಯೊಂದು ಹಾನಿಯಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. 

ಚೆನ್ನೈ(ನ.20): ತಮಿಳುನಾಡಿನಲ್ಲಿ ಗಜಾ ಚಂಡಮಾರುತದ ಅಬ್ಬರ ಮುಂದುವರೆದಿದ್ದು, ತಿರುವರೂರ್ ಬಳಿಯ ತಿರುಕುವಲೈ ನಲ್ಲಿನ ಡಿಎಂಕೆ ಸ್ಥಾಪಕ ದಿವಂಗತ ಎಂ. ಕರುಣಾನಿಧಿ ಅವರ ಪೂರ್ವಜರು ವಾಸಿಸುತ್ತಿದ್ದ ಮನೆಯೊಂದು ಹಾನಿಯಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Add Asianetnews Kannada as a Preferred SourcegooglePreferred

ಗ್ರಂಥಾಲಯ ಹಾಗೂ ಸ್ಮಾರಕವಾಗಿ ನಿರ್ವಹಣೆ ಮಾಡಲಾಗುತ್ತಿದ್ದ ಮನೆ ಮುಂಭಾಗದಲ್ಲಿನ ಮರ ಬಿದ್ದು, ಮೇಲ್ಘಾವಣೆಗೆ ಹಾಗೂ ಮನೆಯ ಹೆಸರು ಕಿತ್ತು ಹೋಗಿದೆ ಎನ್ನಲಾಗಿದೆ.

ನವೆಂಬರ್ 16 ರಂದು ತಮಿಳುನಾಡಿನ ನಾಗಪಟ್ಟಣಂ ಜಿಲ್ಲೆಯ ಕರಾವಳಿಗೆ ಅಪ್ಪಳಿಸಿದ ಗಜಾ ಚಂಡಮಾರುತದಿಂದ 46 ಮಂದಿ ಮೃತಪಟ್ಟಿದ್ದು, ಅಪಾರ ಪ್ರಮಾಣದ ಹಾನಿಯಾಗಿದೆ.