ಅಕ್ರಮ ವ್ಯವಹಾರ ಆರೋಪ ಎದುರಿಸುತ್ತಿರುವ ಕಾರ್ತಿ ಚಿದಂಬರಂರವರನ್ನು ತನಿಖೆ ನಡೆಸಲು ಸಿಬಿಐ ಹುಡುಕುತ್ತಿರುವಾಗಲೇ ಕಾರ್ತಿ ಚಿದಂಬರಂ ಸ್ನೇಹಿತನೊಂದಿಗೆ ಲಂಡನ್'ಗೆ ಪರಾರಿಯಾಗಿದ್ದಾರೆ ಎಂದು ವಿಮಾನನಿಲ್ದಾಣ ಮೂಲಗಳು ತಿಳಿಸಿವೆ.

ನವದೆಹಲಿ (ಮೇ.18): ಅಕ್ರಮ ವ್ಯವಹಾರ ಆರೋಪ ಎದುರಿಸುತ್ತಿರುವ ಕಾರ್ತಿ ಚಿದಂಬರಂರವರನ್ನು ತನಿಖೆ ನಡೆಸಲು ಸಿಬಿಐ ಹುಡುಕುತ್ತಿರುವಾಗಲೇ ಕಾರ್ತಿ ಚಿದಂಬರಂ ಸ್ನೇಹಿತನೊಂದಿಗೆ ಲಂಡನ್ ಗೆ ಪರಾರಿಯಾಗಿದ್ದಾರೆ ಎಂದು ವಿಮಾನನಿಲ್ದಾಣ ಮೂಲಗಳು ತಿಳಿಸಿವೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

2007 ರಲ್ಲಿ ಪಿ ಚಿದಂಬರಂ ಹಣಕಾಸು ಮಂತ್ರಿಯಾಗಿದ್ದಾಗ ಇಂದ್ರಾಣಿ ಮುಖರ್ಜಿ ಹಾಗೂ ಪೀಟರ್ ಮುಖರ್ಜಿ ಒಡೆತನದ ಐಎನ್’ಎಕ್ಸ್ ಮೀಡಿಯಾಗೆ ವಿದೇಶಿ ಬಂಡವಾಳ ಉತ್ತೇಜನ ಮಂಡಳಿಯಿಂದ ಅನುಮತಿ ಪಡೆಯುವಲ್ಲಿ ಅಕ್ರಮವೆಸಗಿದ್ದಾರೆ ಎನ್ನಲಾಗಿದೆ.ಈ ಬಗ್ಗೆ ಸಸಿಬಿಐ ಕಾರ್ತಿ ಚಿದಂಬರಂ ಮೇಲೆ ಪ್ರಕರಣ ದಾಖಲಿಸಿದೆ. ಈ ಬಗ್ಗೆ ವಿಚಾರಣೆ ನಡೆಸಲು ಅವರಿಗೆ ಸಂಬಂಧಪಟ್ಟ ಜಾಗಗಳಲ್ಲೆಲ್ಲಾ ಸಿಬಿಐ ಹುಡುಕಾಟ ನಡೆಸಿದೆ. ಸಿಬಿಐ ಕಣ್ಣು ತಪ್ಪಿಸಿ ಕಾರ್ತಿ ಚಿದಂಬರಂ ಲಂಡನ್’ಗೆ ಪರಾರಿಯಾಗಿದ್ದಾರೆ.