ತಾಯಿಯ 100ನೇ ವರ್ಷದ ಜನ್ಮದಿನದಂದೇ ಮಗಳ ಸಾವು

First Published 3, Apr 2018, 1:48 PM IST
Karnataka Woman turns 100 sees Daughter collapse and die
Highlights

ಮಂಗಳೂರಿನಲ್ಲಿ ಮಹಿಳೆಯೋರ್ವರು ತಮ್ಮ 100ನೇ ಜನ್ಮ ದಿನವನ್ನು ಆಚರಿಸಿಕೊಂಡ ಸಂದರ್ಭದಲ್ಲಿ ಅವಘಡದವೊಂದು ಸಂಭವಿಸಿದೆ.

ಮಂಗಳೂರು : ಮಂಗಳೂರಿನಲ್ಲಿ ಮಹಿಳೆಯೋರ್ವರು ತಮ್ಮ 100ನೇ ಜನ್ಮ ದಿನವನ್ನು ಆಚರಿಸಿಕೊಂಡ ಸಂದರ್ಭದಲ್ಲಿ ಅವಘಡದವೊಂದು ಸಂಭವಿಸಿದೆ.  ಗ್ಲಾಡಿ ಡಿಸೋಜಾ ಅವರು ತಮ್ಮ 100ನೇ ವರ್ಷದ ಜನ್ಮದಿನವನ್ನು ಆಚರಿಸಿಕೊಂಡ ದಿನದಂದೇ ಅವರ ಮಗಳು ಗ್ಲೋರಿಯೋ ಲೋಬೀ (75) ಮೃತಪಟ್ಟಂತಹ ಮನಕಲುಕುವ ಘಟನೆ ನಡೆದಿದೆ.

ಮೊದಲ ವಿಶ್ವ ಯುದ್ಧದ ಸಮಯದಲ್ಲಿ ಜನಿಸಿದ್ದ ಗ್ಲಾಡಿ ಅವರಿಗೆ ನಿನ್ನೆಎ 100 ವರ್ಷ ತುಂಬಿತ್ತು 2ನೇ  ವಿಶ್ವಯುದ್ಧ ನಡೆಯುವ ವೇಳೇಗೆ ಅವರ ವಿವಾಹ ನಡೆದಿತ್ತು. ಅವರ ಪುತ್ರಿ ತಮ್ಮ ತಾಯಿಯ 100ನೇ ವರ್ಷದ ಜನ್ಮದಿನದಲ್ಲಿ ಅತ್ಯಂತ ಉತ್ಸಾಹದಿಂದ ಪಾಲ್ಗೊಂಡಿದ್ದರು. ಗ್ಲೋರಿಯಾ ಅವರು ಕೆನಾಡದಲ್ಲಿ ವಾಸವಾಗಿದ್ದು, ತಾಯಿಯ ಜನ್ಮ ದಿನದ ಹಿನ್ನೆಲೆಯಲ್ಲಿ ಮಂಗಳೂರಿಗೆ ಆಗಮಿಸಿದ್ದರು.  ಆದರೆ ಇಲ್ಲಿಗೆ ಆಗಮಿಸಿದ್ದ ವೇಳೆಯೇ ಅನಾರೋಗ್ಯದಿಂದ ಮೃತಪಟ್ಟಿದ್ದಾರೆ.  

loader