ದೀಪಿಕಾ ಪಡುಕೋಣೆ ಜಾಗತಿಕ ಮಟ್ಟದಲ್ಲಿ ಗುರುತಿಸಿಕೊಂಡ ಕರ್ನಾಟಕದ ಕಲಾವಿದೆ. ಅವರ ಪರ ಕರ್ನಾಟಕ ನಿಲ್ಲಲ್ಲಿದೆ ಎಂದು  ದೀಪಿಕಾ ಪಡುಕೋಣೆ ಬೆಂಬಲಕ್ಕೆ ಸಿಎಂ ಸಿದ್ದರಾಮಯ್ಯ ನಿಂತಿದ್ದಾರೆ. ದೀಪಿಕಾ ಪಡುಕೋಣೆ ಬಗ್ಗೆ ಹರಿಯಾಣ ಸಿಎಂ ಮನೋಹರ್ ಕಟ್ಟರ್​ ಹೇಳಿಕೆಯ ಕುರಿತು  ಸಿಎಂ ಸಿದ್ದರಾಮಯ್ಯ ಆಕ್ರೋಶ ವ್ಯಕ್ತಪಡಿಸಿದ್ದಾರೆ.  ದೀಪಿಕಾ ಕುರಿತು ಹೇಳಿಕೆ ಸಾಂಸ್ಕೃತಿಕ ಅಸಹಿಷ್ಣುಹಿತೆ ಎಂದು ಟೀಕಿಸಿದ್ದಾರೆ. 

ಬೆಂಗಳೂರು (ನ.20): ದೀಪಿಕಾ ಪಡುಕೋಣೆ ಜಾಗತಿಕ ಮಟ್ಟದಲ್ಲಿ ಗುರುತಿಸಿಕೊಂಡ ಕರ್ನಾಟಕದ ಕಲಾವಿದೆ. ಅವರ ಪರ ಕರ್ನಾಟಕ ನಿಲ್ಲಲ್ಲಿದೆ ಎಂದು ದೀಪಿಕಾ ಪಡುಕೋಣೆ ಬೆಂಬಲಕ್ಕೆ ಸಿಎಂ ಸಿದ್ದರಾಮಯ್ಯ ನಿಂತಿದ್ದಾರೆ. ದೀಪಿಕಾ ಪಡುಕೋಣೆ ಬಗ್ಗೆ ಹರಿಯಾಣ ಸಿಎಂ ಮನೋಹರ್ ಕಟ್ಟರ್​ ಹೇಳಿಕೆಯ ಕುರಿತು ಸಿಎಂ ಸಿದ್ದರಾಮಯ್ಯ ಆಕ್ರೋಶ ವ್ಯಕ್ತಪಡಿಸಿದ್ದಾರೆ. ದೀಪಿಕಾ ಕುರಿತು ಹೇಳಿಕೆ ಸಾಂಸ್ಕೃತಿಕ ಅಸಹಿಷ್ಣುಹಿತೆ ಎಂದು ಟೀಕಿಸಿದ್ದಾರೆ. 

Scroll to load tweet…

ಇಂಧನ ಸಚಿವ ಡಿ ಕೆ ಶಿವಕುಮಾರ್ ಕೂಡಾ ದೀಪಿಕಾ ಪರ ಬ್ಯಾಟಿಂಗ್ ಮಾಡಿದ್ದಾರೆ. ಇದೇನಾ ಬಿಜೆಪಿ ಸಂಸ್ಕೃತಿ? ದೀಪಿಕಾಗೆ ಬೆದರಿಕೆಯೊಡ್ಡಿದ ಬಿಜೆಪಿ ಮುಖಂಡನ ವಿರುದ್ಧ ಡಿಕೆಶಿ ಕಿಡಿಕಾರಿದ್ದಾರೆ. ಸಿನಿಮಾ ಬಗ್ಗೆ ಆಕ್ಷೇಪವಿದ್ದರೆ ಸಿಬಿಎಫ್‍ಸಿ ಮೊರೆ ಹೋಗಬೇಕು.

ಅದು ಬಿಟ್ಟು ಕಲಾವಿದರಿಗೆ ಬೆದರಿಕೆ ಹಾಕುವುದು ಯಾಕೆ? ಮಹಿಳೆಗೆ ಬೆದರಿಕೆ ನೀಡುತ್ತಿರುವುದು ಸರಿಯಲ್ಲ. ಇದು ದೇಶದಲ್ಲಿ ಅಸಹಿಷ್ಣುತೆ ಮತ್ತು ಮತಾಂಧತೆ ಹೆಚ್ಚುತ್ತಿರುವುದರ ಸಂಕೇತ. ದೀಪಿಕಾಗೆ ಭದ್ರತೆ ನೀಡುವಂತೆ ಸಿಎಂಗೆ ಮನವಿ ಮಾಡುತ್ತೇನೆ ಎಂದು ಡಿಕೆಶಿ ಹೇಳಿದ್ದಾರೆ. 

Scroll to load tweet…