Asianet Suvarna News Asianet Suvarna News

ಒಬಾಮಾಗೆ ಪ್ರಶ್ನೆ ಕೇಳಿದ ಬೆಂಗಳೂರು ಮಹಿಳೆ

ನಮ್ಮದು ಯಾವುದೇ ತಪ್ಪಿಲ್ಲದೇ ಇದ್ದರೂ,ನಮ್ಮದಲ್ಲದ ತಪ್ಪಿಗೆ, ಲೈಂಗಿಕ ಅಲ್ಪಸಂಖ್ಯಾತರು, ತೃತೀಯ ಲಿಂಗಿಗಳ ವಿರುದ್ಧ ಸರ್ಕಾರದ ಆಡಳಿತ ಯಂತ್ರವೇ ತಾರತಮ್ಯ ಮಾಡಿದರೆ ಅಥವಾ ಭಯೋತ್ಪಾದನೆ ಮಾಡಿದರೆ ಏನು ಮಾಡಬೇಕು. ಇದಕ್ಕೆ ನನ್ನ ತೀವ್ರ ವಿರೋಧವಿದೆ ಎಂದು ಒಬಾಮಾರನ್ನು ಪದ್ಮಶಾಲಿ ಪ್ರಶ್ನಿಸಿದರು.

Karnataka transgender activist Akkai Padmashali ask question obama

ನವದೆಹಲಿ (ಡಿ.02): ಅಮೆರಿಕ ಮಾಜಿ ಅಧ್ಯಕ್ಷ ಬರಾಕ್ ಒಬಾಮಾ ಅವರ ಟೌನ್‌ಹಾಲ್ ಸಂವಾದದ ವೇಳೆ, ಬೆಂಗಳೂರಿನ ಲೈಂಗಿಕ ಕಾರ್ಯಕರ್ತೆ ಅಕ್ಕೈ ಪದ್ಮಶಾಲಿ ತೃತೀಯ ಲಿಂಗಿಗಳ ಪರವಾಗಿ ಪ್ರಶ್ನೆ ಕೇಳಿದ್ದಾರೆ.

ಒಬಾಮಾ ಅವರ ಟೌನ್‌ಹಾಲ್ ಕಾರ್ಯಕ್ರಮಕ್ಕೆ ದೇಶದೆಲ್ಲೆಡೆಯಿಂದ 250 ಸಾಧಕರನ್ನು ಬದಲಾವಣೆಯ ಹರಿಕಾರರನ್ನು ಆಹ್ವಾನಿಸಲಾಗಿತ್ತು. ಈ ವೇಳೆ, ಪ್ರಶ್ನೆ ಕೇಳಲು ಒಬಾಮಾ ಪದ್ಮಶಾಲಿಗೆ ಅವಕಾಶ ಕಲ್ಪಿಸಿಕೊಟ್ಟರು. ‘ನಾನೊಬ್ಬಳು ಲಿಂಗ ಪರಿವರ್ತನೆಗೊಂಡ ಮಹಿಳೆ. ನಾನೊಬ್ಬ ಲೈಂಗಿಕ ಕಾರ್ಯಕರ್ತೆ. ನಾನೊಬ್ಬಳು ಬಿಕ್ಷುಕಿ. ನನ್ನನ್ನು ಸಮಾಜದ ಎಲ್ಲಾ ವಲಯದಿಂದ ತಿರಸ್ಕರಿಸಲಾಯಿತು. ಒಬ್ಬ ಸಾಮಾಜಿಕ ಕಾರ್ಯಕರ್ತೆಯಾಗಿ ಹಲವಾರು ವಿಷಯಗಳನ್ನು ನಿಮ್ಮ ಮುಂದೆ ಸಾದರ ಪಡಿಸಲು ಬಯಸುತ್ತೇನೆ’.

ನಮ್ಮದು ಯಾವುದೇ ತಪ್ಪಿಲ್ಲದೇ ಇದ್ದರೂ,ನಮ್ಮದಲ್ಲದ ತಪ್ಪಿಗೆ, ಲೈಂಗಿಕ ಅಲ್ಪಸಂಖ್ಯಾತರು, ತೃತೀಯ ಲಿಂಗಿಗಳ ವಿರುದ್ಧ ಸರ್ಕಾರದ ಆಡಳಿತ ಯಂತ್ರವೇ ತಾರತಮ್ಯ ಮಾಡಿದರೆ ಅಥವಾ ಭಯೋತ್ಪಾದನೆ ಮಾಡಿದರೆ ಏನು ಮಾಡಬೇಕು. ಇದಕ್ಕೆ ನನ್ನ ತೀವ್ರ ವಿರೋಧವಿದೆ ಎಂದು ಒಬಾಮಾರನ್ನು ಪದ್ಮಶಾಲಿ ಪ್ರಶ್ನಿಸಿದರು. ಇದಕ್ಕೆ ಉತ್ತರಿಸಿದ ಒಬಾಮಾ, ಬದಲಾವಣೆಗೆ ಸ್ಥಿರ ಸಾರ್ವಜನಿಕ ಶಿಕ್ಷಣ ಮತ್ತು ರಾಜಕೀಯ ತಂತ್ರಗಾರಿಕೆಯ ಅಗತ್ಯವಿದೆ. ಆದರೆ, ನಿಮ್ಮ ಧ್ವನಿಯನ್ನು ಗುರುತಿಸುವುದರಿಂದ ಮತ್ತು ನಿಮ್ಮ ಅಭಿಪ್ರಾಯಗಳನ್ನು ಸ್ಪಷ್ಟವಾಗಿ ತಿಳಿಸುವುದರಿಂದ ಬದಲಾವಣೆ ಆರಂಭವಾಗುತ್ತದೆ ಎಂದು ಹೇಳಿದರು.

Follow Us:
Download App:
  • android
  • ios