Asianet Suvarna News Asianet Suvarna News

6000 ಬಸ್ ಖರೀದಿಸಿದ ಕೆಎಸ್'ಆರ್ಟಿಸಿ : ಹಳೆಯ ಬಸ್ ಗುಜರಿಗೆ

ಇದೀಗ ಖರೀ​ದಿ​ಸಿ​ರುವ ವೋಲ್ವೋ ಹಾಗೂ ಐಷರ್‌ ಕಂಪನಿ​ಯ ಬಸ್‌​ಗ​ಳು ಪ್ರತಿ ಲೀಟರ್‌ ಡೀಸೆಲ್‌ಗೆ 5.8 ಕಿ.ಮೀ ಇಂಧನ ಕ್ಷಮತೆ ಬರು​ತ್ತಿ​ದೆ. ಪ್ರತಿ ಬಸ್‌ಗೆ ಸುಮಾರು 20 ಲಕ್ಷ ರು. ವೆಚ್ಚವಾಗಿದ್ದು, ಮಾರ್ಚ್ ಅಂತ್ಯ​ದೊ​ಳ​ಗೆ ಕೆಎ​ಸ್‌​ಆ​ರ್‌​ಟಿ​ಸಿ​ಗೆ 1,594 ಬಸ್‌ಗಳು ಸೇರ್ಪಡೆಯಾಗಲಿವೆ

Karnataka state news

ಬೆಂಗ​ಳೂ​ರು(ಸೆ.23): ಕರ್ನಾ​ಟಕ ರಾಜ್ಯ ರಸ್ತೆ ಸಾರಿಗೆ ನಿಗ​ಮದ 380 ನೂತ​ನ ವೇಗ​ದೂತ ಬಸ್‌​ಗ​ಳನ್ನು ಸಂಚಾರಕ್ಕೆ ಬಿಡಲಾಗಿದೆ. ಅಷ್ಟೇ ಅಲ್ಲ. ಮುಂದಿನ ಮಾಚ್‌ರ್‍ ಒಳಗಾಗಿ ಇನ್ನೂ 6000 ಹೊಸ ಬಸ್‌ಗಳನ್ನು ಖರೀದಿಸಲು ನಿರ್ಧರಿಸಲಾಗಿದೆ.

ಬೆಂಗ​ಳೂರಿನ ಶಾಂತಿ​ನ​ಗರದಲ್ಲಿ​ರುವ ಕೇಂದ್ರಿಯ ಘಟಕ 4ರಲ್ಲಿ ಆಯೋ​ಜಿ​ಸಿದ್ದ ಕಾರ್ಯ​ಕ್ರ​ಮ​ದಲ್ಲಿ ನೂತನ ಬಸ್ಸುಗಳ ಸಂಚಾರಕ್ಕೆ ಹಸಿರು ನಿಶಾನೆ ತೋರಿ​ದ​ ಸಾರಿಗೆ ಸಚಿವ ರಾಮ​ಲಿಂಗಾ​ರೆಡ್ಡಿ ಮಾತ​ನಾ​ಡಿದ ಅವರು, ಮುಂದಿನ ಮಾಚ್‌ರ್‍ ಅಂತ್ಯ​ದೊ​ಳಗೆ ನಾಲ್ಕು ನಿಗ​ಮ​ಗ​ಳಿಗೆ ಸುಮಾರು 6000 ಹೊಸ ಬಸ್‌​ಗ​ಳನ್ನು ಸೇರ್ಪಡೆ​ಗೊ​ಳಿ​ಸ​ಲಾ​ಗು​ವು​ದು. ಇದೇ ಮೊದಲ ಬಾರಿಗೆ ಸಾಮಾನ್ಯ ಸಾರಿಗೆ ವಿಭಾ​ಗ​ದ​ಲ್ಲಿ ಟಾಟಾ ಹಾಗೂ ಅಶೋಕ್‌ ಲೈಲ್ಯಾಂಡ್‌ ಕಂಪನಿ ಹೊರತು ಪಡಿಸಿ ವೋಲ್ವೋ ಮತ್ತು ಐಷರ್‌ ಕಂಪೆ​ನಿ​ ಜಂಟಿ​ಯಾಗಿ ನಿರ್ಮಿ​ಸಿ​ರುವ ಬಸ್‌​ಗ​ಳನ್ನು ಖರೀ​ದಿ​ಸಿ ಕಾರ್ಯಾ​ಚ​ರ​ಣೆ​ಗಿ​ಳಿ​ಸ​ಲಾ​ಗಿದೆ. ಹೀಗಾ​ಗಿ ಎಲ್ಲಾ ನಿಗ​ಮ​ಗ​ಳಲ್ಲಿ​ರುವ ಹಳೆಯ ಬಸ್‌​ಗ​ಳ​ನ್ನು ಗುಜರಿಗೆ ಹಾಕಿ ಆಯಾ ಮಾರ್ಗ​ಕ್ಕೆ ಹೊಸ ಬಸ್‌​ಗ​ಳ ಮೂಲಕ ಸೇವೆ ಒದ​ಗಿ​ಸ​ಲಾ​ಗು​ವುದು ಎಂದು ತಿಳಿ​ಸಿ​ದರು.

ಈಗಾ​ಗಲೇ ನಗರ ಸಾರಿ​ಗೆ​ ಬಸ್‌​ಗ​ಳ​ನ್ನು ಎಲ್ಲಾ ಜಿಲ್ಲಾ ಕೇಂದ್ರ​ಗ​ಳಿಗೆ ವಿತ​ರಿಸಲಾಗಿದೆ. ಹಾಗೇ ಇದೀಗ ಖರೀ​ದಿ​ಸಿ​ರುವ ​ಹೊಸ ಬಸ್‌​ಗಳು ಆಯಾ ಜಿಲ್ಲೆ​ಯ ಗ್ರಾಮೀಣ ಪ್ರದೇ​ಶ​ಗ​ಳಲ್ಲಿ ಕಾರ್ಯಾ​ಚ​ರಣೆ ನಡೆ​ಸ​ಲಿ​ವೆ ಎಂದು ತಿಳಿ​ಸಿ​ದರು.

ಈ ಹಿಂದೆ ಖರೀ​ದಿ​ಸಿ​ದ್ದ ವೋಲ್ವೋ ಬಸ್‌​ಗ​ಳ ಸವೀರ್‍ಸ್‌ಗೆ ತೊಂದ​ರೆ​ಯಾ​ಗಿತ್ತು. ಆದರೆ, ಇದೀಗ ವೋಲ್ವೋ ಹಾಗೂ ಐಷರ್‌ ಕಂಪೆ​ನಿ ಜಂಟಿ​ಯಾಗಿ ನಿರ್ಮಿ​ಸಿ​ರುವ ಬಸ್‌​ಗ​ಳಲ್ಲಿ ಆ ತೊಂದರೆ ಇಲ್ಲ. ಪ್ರಾಯೋ​ಗಿ​ಕ​ವಾಗಿ ಎಲ್ಲಾ ರೀತಿಯಲ್ಲಿಯೂ ನಮ್ಮ ಸಿಬ್ಬಂದಿ ಪರಿ​ಶೀ​ಲಿ​ಸಿ​ದ್ದಾ​ರೆ. ಚಾಲಕರು ಹಾಗೂ ತಂತ್ರ​ಜ್ಞ​ರಿಗೂ ತರಬೇತಿ ನೀಡಲಾಗಿದೆ. ಹೀಗಾ​ಗಿ ಸವೀರ್‍ಸ್‌ಗೆ ಯಾವುದೇ ತೊಂದರೆ ಆಗುವುದಿಲ್ಲ ಎಂದು ಸ್ಪಷ್ಟಪಡಿ​ಸಿ​ದ​ರು.

ಉತ್ತಮ ಇಂಧನ ಕ್ಷಮತೆ

ಇದೀಗ ಖರೀ​ದಿ​ಸಿ​ರುವ ವೋಲ್ವೋ ಹಾಗೂ ಐಷರ್‌ ಕಂಪನಿ​ಯ ಬಸ್‌​ಗ​ಳು ಪ್ರತಿ ಲೀಟರ್‌ ಡೀಸೆಲ್‌ಗೆ 5.8 ಕಿ.ಮೀ ಇಂಧನ ಕ್ಷಮತೆ ಬರು​ತ್ತಿ​ದೆ. ಪ್ರತಿ ಬಸ್‌ಗೆ ಸುಮಾರು 20 ಲಕ್ಷ ರು. ವೆಚ್ಚವಾಗಿದ್ದು, ಮಾರ್ಚ್ ಅಂತ್ಯ​ದೊ​ಳ​ಗೆ ಕೆಎ​ಸ್‌​ಆ​ರ್‌​ಟಿ​ಸಿ​ಗೆ 1,594 ಬಸ್‌ಗಳು ಸೇರ್ಪಡೆಯಾಗಲಿವೆ ಎಂದು ತಿಳಿ​ಸಿ​ದ​ರು.

ಎಲ್ಲೆಲ್ಲಿ?

ಬೆಂಗ​ಳೂರು, ರಾಮ​ನಗರ, ತುಮ​ಕೂರು, ಕೋಲಾರ, ಚಿಕ್ಕ​ಬ​ಳ್ಳಾ​ಪುರ, ಮೈಸೂರು, ಮೈಸೂರು ನಗರ, ಮಂಡ್ಯ, ಚಾಮ​ರಾ​ಜ​ನ​ಗರ, ಹಾಸನ, ಚಿಕ್ಕ​ಮಗ​ಳೂರು, ಮಂಗ​ಳೂರು, ಪುತ್ತೂರು, ದಾವ​ಣ​ಗೆರೆ ಈ ಭಾಗ​ಗ​ಳಲ್ಲಿ ನೂತನ ಬಸ್‌​ಗಳು ಕಾರ್ಯಾ​ಚ​ರಣೆ ನಡೆ​ಸ​ಲಿವೆ ಎಂದು ಅವರು ತಿಳಿ​ಸಿ​ದ​ರು.

ಕಾರ್ಯ​ಕ್ರ​ಮ​ದಲ್ಲಿ ಕೆಎ​ಸ್‌​ಆ​ರ್‌​ಟಿ​ಸಿಯ ಭದ್ರತಾ ವಿಭಾ​ಗದ ಮುಖ್ಯಸ್ಥ ಬಿಎ​ನ್‌​ಎಸ್‌ ರೆಡ್ಡಿ ಇತ​ರರು ಇದ್ದ​ರು.

Latest Videos
Follow Us:
Download App:
  • android
  • ios