2017-18 ನೇ ಸಾಲಿನ ಬಹು ನಿರೀಕ್ಷಿತ ರಾಜ್ಯ ಬಜೆಟ್ ನ್ನು ಸಿಎಂ ಸಿದ್ದರಾಮಯ್ಯ ಮಂಡಿಸುತ್ತಿದ್ದಾರೆ. ಎಂದಿನಂತೆ ಕೃಷಿಗೆ ಮೊದಲ ಆದ್ಯತೆ ನೀಡಲಾಗಿದೆ.
ಬೆಂಗಳೂರು (ಮಾ.15): 2017-18 ನೇ ಸಾಲಿನ ಬಹು ನಿರೀಕ್ಷಿತ ರಾಜ್ಯ ಬಜೆಟ್ ನ್ನು ಸಿಎಂ ಸಿದ್ದರಾಮಯ್ಯ ಮಂಡಿಸುತ್ತಿದ್ದಾರೆ. ಎಂದಿನಂತೆ ಕೃಷಿಗೆ ಮೊದಲ ಆದ್ಯತೆ ನೀಡಲಾಗಿದೆ.
ಈ ಬಜೆಟ್ ನಲ್ಲಿ ರೈತರಿಗೆ ಸಿಕ್ಕಿದ್ದೇನು?
ರೈತರ ಸಾಲ ಮನ್ನಾ ಇಲ್ಲ
ಪ್ರತಿ ಗ್ರಾ. ಪಂ. ನಲ್ಲಿ ಪ್ರಾಥಮಿಕ ಕೃಷಿ ಸಂಘ ಸ್ಥಾಪನೆ ಮಾಡಲಾಗುವುದು
25 ಲಕ್ಷ ರೈತರಿಗೆ 13,500 ಕೋಟಿ ಸಾಲದ ಗುರಿ
ರಿಯಾಯಿತಿ ದರದಲ್ಲಿ ಕೃಷಿ ಯಂತ್ರಗಳನ್ನು ಬಾಡಿಗೆಗೆ ನೀಡಲು ಅವಕಾಶ ಕಲ್ಪಿಸಲಾಗಿದೆ.
ಶೂನ್ಯ ಬಡ್ಡಿದರದಲ್ಲಿ 3 ಲಕ್ಷ ಕೃಷಿ ಸಾಲ ಮುಂದುವರಿಕೆ
ಅನ್ನಭಾಗ್ಯ ಅಕ್ಕಿ 5 ಕೆಜಿಯಿಂದ 7 ಕೆಜಿಗೆ ಏರಿಕೆ
ರೈತರಿಗೆ 3 ಲಕ್ಷ ರೂವರೆಗಿನ ಅಲ್ಪಾವಧಿ ಕೃಷಿ ಸಾಲ
ಕೃಷಿ ಭಾಗ್ಯ ಯೋಜನೆಯ ಅಡಿಯಲ್ಲಿ 600 ಕೋಟಿ
ರೈತ ಸುರಕ್ಷಾ ಪ್ರಧಾನ ಮಂತ್ರಿ ಫಸಲ್ ಬಿಮಾ ಯೋಜನೆಗೆ 845 ಕೋಟಿ
ತುಂತುರು ನೀರಾವರಿಗೆ 375 ಕೋಟಿ ಮೀಸಲು
ಕೃಷಿ ಯಂತ್ರಧಾರೆ ಕಾರ್ಯಕ್ರಮಕ್ಕೆ 122 ಕೋಟಿ ಮೀಸಲು
ಕೃಷಿಯಲ್ಲಿ ಸುಧಾರಿತ ತಾಂತ್ರಿಕತೆ ಅಳವಡಿಕೆಗೆ ಪ್ರೋತ್ಸಾಹ ಧನ 100 ಕೋಟಿ
ಗ್ರಾಮೀಣ ಕೃಷಿ ಸೇವಾ ಕೇಂದ್ರಗಳ ಸ್ಥಾಪನೆಗೆ 10 ಕೋಟಿ
ಕೃಷಿ ಇಲಾಖೆಗೆ ಒಟ್ಟು 5080 ಕೋಟಿ ಮೀಸಲು
