ಎಸ್ ಎಸ್ ಎಲ್ ಸಿ ಫಲಿತಾಂಶ ಪ್ರಕಟವಾಗಿದೆ.  ಹಾಸನ ಮತ್ತು ರಾಮನಗರ ಜಿಲ್ಲೆಗಳು ಉತ್ತಮ ಸಾಧನೆ ಮಾಡಿವೆ. ಆದರೆ ಸೋಶಿಯಲ್ ಮೀಡಿಯಾ ಮಾತ್ರ ಈ ಸಾಧನೆಯನ್ನು ತನ್ನದೇ ಆದ ರೀತಿ ವಿಶ್ಲೇಷಣೆ ಮಾಡಿದೆ.

ಬೆಂಗಳೂರು[ಏ. 30] ಸಿಎಂ ಕುಮಾರಸ್ವಾಮಿ ಅವರ ತವರು ಜಿಲ್ಲೆಗಳಾದ ಹಾಸನ ಮತ್ತು ರಾಮನಗರ ಎಸ್ ಎಸ್ ಎಲ್ ಸಿ ಫಲಿತಾಂಶದಲ್ಲಿ ಮೊದಲೆರಡು ಸ್ಥಾನ ಗಳಿಸಿವೆ. ಸೋಶಿಯಲ್ ಮೀಡಿಯಾ ಮಾತ್ರ ಇದಕ್ಕೆ ಸಂಬಂಧಿಸಿ ತನ್ನದೇ ಆದ ಪ್ರತಿಕ್ರಿಯೆ ನೀಡುತ್ತಿದೆ. 

ಎನ್ . ಮಹೇಶ್ ಶಿಕ್ಷಣ ಸಚಿವ ಸ್ಥಾನ ತೊರೆದ ಮೇಲೆ ಆ ಖಾತೆ ಸಹ ಕುಮಾರಸ್ವಾಮಿ ಬಳಿಯೇ ಇದೆ. ಕುಮಾರಸ್ವಾಮಿಯವರ ತವರು ಜಿಲ್ಲೆಗಳಾದ ಹಾಸನ ಮತ್ತು ರಾಮನಗರದ ಮತ್ತು ರಾಮನಗರ ಸಾಧನೆ ಮಾಡಿರುವುದಕ್ಕೆ ಟ್ರೋಲಿಗರು HDK ಅವರನ್ನು ಎಳೆದು ತಂದಿದ್ದಾರೆ. ಕುಮಾರಸ್ವಾಮಿ ಹಿಂದೊಮ್ಮೆ ಕರಾವಳಿ ಜನರ ಕುರಿತಾಗಿ ಮಾತನಾಡಿದ್ದನ್ನು ಉಲ್ಲೇಖ ಮಾಡಿದ್ದಾರೆ.

SSLC ಫಲಿತಾಂಶ ಪ್ರಕಟ, ಗ್ರಾಮೀಣ ವಿದ್ಯಾರ್ಥಿಗಳೇ ಮೇಲುಗೈ

ದ್ವಿತೀಯ ಪಿಯು ಫಲಿತಾಂಶದಲ್ಲಿ ಉಡುಪಿ ಮತ್ತು ಮಂಗಳೂರು ಅಗ್ರ ಸ್ಥಾನ ಕಾಯ್ದುಕೊಂಡಿದ್ದವು. ಆದರೆ SSLC ಫಲಿತಾಂಶದಲ್ಲಿ ಮಾತ್ರ ಕೊಂಚ ಕೆಳಗಿಳಿದಿವೆ. ಹಾಸನ ಮತ್ತು ರಾಮನಗರ ಟಾಪ್ ನಲ್ಲಿ ಕಾಣಿಸಿಕೊಂಡಿದ್ದು ಎರಡು ದಿಕ್ಕಿನಿಂದ ಟ್ರೋಲ್ ಆಗುತ್ತಿದೆ.


View post on Instagram
View post on Instagram