Karnataka SSLC & PUC Exam Time Table 2026 Announced PUC from Feb 28, SSLC from Mar 18 ಕರ್ನಾಟಕ ಶಾಲಾ ಪರೀಕ್ಷಾ ಮತ್ತು ಮೌಲ್ಯ ನಿರ್ಣಯ ಮಂಡಳಿಯು 2026ನೇ ಸಾಲಿನ ಎಸ್ಸೆಸ್ಸೆಲ್ಸಿ ಮತ್ತು ದ್ವಿತೀಯ ಪಿಯುಸಿ ಪರೀಕ್ಷೆ-1 ಮತ್ತು 2ರ ಅಂತಿಮ ವೇಳಾಪಟ್ಟಿಯನ್ನು ಅಧಿಕೃತವಾಗಿ ಪ್ರಕಟಿಸಿದೆ.
ಬೆಂಗಳೂರು (ನ.5): ಕರ್ನಾಟಕ ಶಾಲಾ ಪರೀಕ್ಷಾ ಮತ್ತು ಮೌಲ್ಯ ನಿರ್ಣಯ ಮಂಡಳಿ 2026ರ ಪಿಯುಸಿ ಹಾಗೂ ಎಸ್ಸೆಸ್ಸೆಲ್ಸಿ ಪರೀಕ್ಷೆಯ ವೇಳಾಪಟ್ಟಿ ಪ್ರಕಟ ಮಾಡಿದೆ. 2026ರ SSLC ಮತ್ತು ದ್ವಿತೀಯ PU ಪರೀಕ್ಷೆ-1 & 2ರ ಅಂತಿಮ ವೇಳಾಪಟ್ಟಿಯನ್ನು ಪರೀಕ್ಷಾ ಮಂಡಳಿಯ ವೆಬ್‌ಸೈಟ್‌ನಲ್ಲಿ ಪ್ರಕಟಿಸಲಾಗಿದೆ. www.kseab.karnataka.gov.in ವೆಬ್‌ಸೈಟ್‌ನಲ್ಲಿ ಸಂಪೂರ್ಣವಾದ ವೇಳಾಪಟ್ಟಿ ನೀಡಲಾಗಿದೆ.
SSLC ಪರೀಕ್ಷೆ- 1 ಮಾರ್ಚ್ 18 ರಿಂದ ಏಪ್ರಿಲ್ 2ರವರೆಗೆ ನಡೆಯಲಿದೆ. ಇನ್ನು SSLC ಪರೀಕ್ಷೆ-2 ಮೇ-18 ರಿಂದ ಮೇ 25 ವರೆಗೆ ನಡೆಯಲಿದೆ. ದ್ವೀತಿಯ PUC ಪರೀಕ್ಷೆ -1 ಫೆಬ್ರವರಿ 28 ರಿಂದ ಮಾಚ್೯ 17 ವರೆಗೆ ನಡೆಯಲಿದ್ದರೆ, ದ್ವೀತಿಯ PUC ಪರೀಕ್ಷೆ-2 ಏಪ್ರಿಲ್ 25ರಿಂದ ಮೇ 9ವರೆಗೆ ನಡೆಯಲಿದೆ.
