ಇದೇ ವೇಳೆ, ಫೆಬ್ರವರಿ 7ರಿಂದ ಕಾವೇರಿ ನದಿ ನೀರು ವಿಚಾರಣೆ ಆಲಿಸಲಾಗುವುದು ಎಂದೂ ಸುಪ್ರೀಂಕೋರ್ಟ್ ತಿಳಿಸಿದೆ.
ನವದೆಹಲಿ(ಜ. 04): ತಮಿಳುನಾಡಿಗೆ ಪ್ರತಿ ನಿತ್ಯ 2 ಸಾವಿರ ಕ್ಯೂಸೆಕ್ ನೀರು ಬಿಡುವುದನ್ನು ಮುಂದುವರಿಸಬೇಕೆಂದು ಕರ್ನಾಟಕ ಸರಕಾರಕ್ಕೆ ಸುಪ್ರೀಂಕೋರ್ಟ್ ಬುಧವಾರ ಆದೇಶಿಸಿದೆ. ಮುಂದಿನ ಆದೇಶ ಬರುವವರೆಗೂ ಈ ಕ್ರಮ ಮುಂದುವರಿಸಲು ಸೂಚಿಸಲಾಗಿದೆ. ನ್ಯಾ| ದೀಪಕ್ ಮಿಶ್ರಾ ನೇತೃತ್ವದ ತ್ರಿಸದಸ್ಯ ಪೀಠವು ಕಳೆದ ಬಾರಿ ಮಧ್ಯಂತರ ಆದೇಶದ ತೀರ್ಪನ್ನು ಮುಂದುವರಿಸಲು ನಿರ್ಧರಿಸಿತು.
ಇದೇ ವೇಳೆ, ಫೆಬ್ರವರಿ 7ರಿಂದ ಕಾವೇರಿ ನದಿ ನೀರು ವಿಚಾರಣೆ ಆಲಿಸಲಾಗುವುದು ಎಂದೂ ಸುಪ್ರೀಂಕೋರ್ಟ್ ತಿಳಿಸಿದೆ. ಅಷ್ಟೇ ಅಲ್ಲ, ಫೆ.7ರಿಂದ ಮೂರು ವಾರಗಳ ಕಾಲ ಪ್ರತೀ ದಿನ ಮಧ್ಯಾಹ್ನ 2ಗಂಟೆಗೆ ನ್ಯಾಯಾಲಯದಲ್ಲಿ ವಿಚಾರಣೆ ನಡೆಯುವುದು ಎಂದು ಸುಪ್ರೀಂ ತ್ರಿಸದಸ್ಯ ಪೀಠ ಹೇಳಿದೆ.
